ಕೋವಿಡ್ ಮುಂಜಾಗ್ರತೆ : ಕಲ್ಯಾಣ ಮಂಟಪ ಮಾಲೀಕರ ಸಭೆ ನಡೆಸಿದ ಮೈಸೂರು ಪೊಲೀಸರು

ಮೈಸೂರು,ನವೆಂಬರ್,04,2020(www.justkannada.in) : ನಗರದ ಎಲ್ಲೆಡೆ ಸಭೆ, ಸಮಾರಂಭ, ಮದುವೆ…ಈ ರೀತಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಸೇರಿದ್ದರೆ ನಮಗೆ ಮಾಹಿತಿ ನೀಡಿ ಎಂದು ಮೈಸೂರು ನಗರ ಡಿಸಿಪಿ ಪ್ರಕಾಶ್ ಗೌಡ ಹೇಳಿದರು.Covid-caution-meeting-owners-welfare-pavilion-Mysore-Police

ಬುಧವಾರ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಮಾರ್ಗದರ್ಶನದಂತೆ ನಗರದ ವಿವಿಧೆಡೆಗಳಲ್ಲಿರುವ ಸಮುದಾಯ ಭವನ, ಕಲ್ಯಾಣಮಂಟಪಗಳ ಮಾಲೀಕರ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿಯೂ, ಸಭೆ,ಸಮಾರಂಭ, ಮದುವೆ ಹೀಗೆ ಅನೇಕ ಕಾರ್ಯಕ್ರಮಗಳು ಹೆಚ್ಚಿನದಾಗಿ ನಡೆಯುತ್ತಿವೆ. ಈ ಸಮಾರಂಭಗಳಲ್ಲಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದರೆ ಯಾವುದೇ ಸಮಸ್ಯೆಯಿಲ್ಲ.

ಆದರೆ, ಇದರ ಹೊರತಾಗಿ ಹೆಚ್ಚಿನ ಜನ ಸೇರಿಸುವುದು, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದಿರುವುದು ಕಂಡು ಬಂದರೆ. ಅಂಥಹ ಸಂದರ್ಭದಲ್ಲಿ ನಮಗೆ ಮಾಹಿತಿ ನೀಡಿ ಎಂದು ಡಿಸಿಪಿ ಪ್ರಕಾಶ್ ಗೌಡ ಸೂಚಿಸಿದರು.

ಅಡುಗೆ ಮಾಡುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

ಸಭೆ, ಸಮಾರಂಭ, ಮದುವೆಗಳಲ್ಲಿ ಅಡುಗೆ ಮಾಡುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿ ಮಾಡಿಸಿರಬೇಕು. ಸಭೆ, ಸಮಾರಂಭದಲ್ಲಿ  ಕೋವಿಡ್ ಟೆಸ್ಟ್ ಅಗತ್ಯವಿದ್ದರೆ, ಉಚಿತವಾಗಿ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದರು.

ಲಸಿಕೆ ಕಂಡು ಹಿಡಿಯುವವರಿಗೆ ಸಹಕರಿಸಿ

ಕೊರೊನಾ ಸೋಂಕಿಗೆ ಇನ್ನೂ ಲಸಿಕೆ ಕಂಡು ಹಿಡಿಯದ ಕಾರಣ ಈ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಕೈಗೊಳ್ಳಬೇಕಿದೆ. ಹೀಗಾಗಿ, ಕೊರೊನಾ ಗೆ ಲಸಿಕೆ ಕಂಡು ಹಿಡಿಯುವವರಿಗೆ ಎಲ್ಲರೂ ಸಹಕರಿಸಬೇಕು ಎಂದು ಡಿಸಿಪಿ ಮನವಿ ಮಾಡಿದರು.

ಸಭೆಯಲ್ಲಿ ಸಂಚಾರಿ ಡಿಸಿಪಿ, ನಾಲ್ಕು ವಿಭಾಗಗಳ ಎಸಿಪಿಗಳು ಉಪಸ್ಥಿತರಿದ್ದರು.

key words : Covid-caution-meeting-owners-welfare-pavilion-Mysore-Police