ಮೈಸೂರು,ಏಪ್ರಿಲ್,1,2021(www.justkannada.in): ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಅಮರನಾಥ್ ಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಕಳೆದ ಹಲವು ದಿನಗಳಿಂದ ರಾಜ್ಯ ವ್ಯಾಪ್ತಿ ಡಾ. ಪುಷ್ಪಅಮರನಾಥ್ ಸಂಚಾರಿಸಿದ್ದರು. ರಾಜ್ಯದ ಉಪಚುನಾವಣೆಗಳಲ್ಲಿ ತೊಡಗಿದ್ದ ಪುಷ್ಪ ಅಮರನಾಥ್ ಅವರಿಗೆ ಬೆಳಗಾವಿ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅನಾರೋಗ್ಯ ಉಂಟಾಗಿತ್ತು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಆಸ್ಪತ್ರೆಗೆ ದಾಖಲಾದ ಬಳಿಕ ಡಾ.ಪುಷ್ಪ ಅಮರನಾಥ್ ಅವರಿಗೆ ಕೋವಿಡ್ 19 ಪಾಸಿಟಿವ್ ದೃಢವಾಗಿದೆ. ಈ ಬಗ್ಗೆ ಸ್ವತಃ ಪುಷ್ಪ ಅಮರನಾಥ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಜಾಗ್ರತೆಯ ದೃಷ್ಟಿಯಿಂದ ನಾನು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷಿಸಿಕೊಳ್ಳಿ ಎಂದು ಪುಷ್ಪ ಅಮರನಾಥ್ ಮನವಿ ಮಾಡಿದ್ದಾರೆ.
Key words: covid- confirmed -KPCC Women’s Unit – Chairperson – Dr Pushpa Amarnath