ಮೈಸೂರು,ಜು,8,2020(www.justkannada.in): ಕರೊನಾ ನಿಯಂತ್ರಣಕ್ಕೆ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಸರ್ಕಾರ ಪಾರದರ್ಶಕವಾಗಿದ್ದರೆ ಲೆಕ್ಕ ಕೊಡಲೇ ಬೇಕು. ಲೆಕ್ಕ ಕೊಡದಿದ್ದರೆ ಬಿಡೋರ್ಯಾರು..? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿ. ನಾನೇ ಲೆಕ್ಕ ಪರಿಶೀಲಿಸುತ್ತೇನೆ, ಸರ್ಕಾರ ಪಾರದರ್ಶಕವಾಗಿದ್ದರೆ ಲೆಕ್ಕ ಕೊಡಬೇಕು. ಲೆಕ್ಕ ಕೊಡಲೇ ಬೇಕು, ಕೊಡದಿದ್ದರೆ ಬಿಡೋರ್ಯಾರು. ಇದನ್ನು ಇಲ್ಲಿಗೇ ಬಿಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಲಾಕ್ಡೌನ್ ಈಗ ಅವಶ್ಯಕತೆ ಇತ್ತು…..
ಇತ್ತೀಚೆಗೆ ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಲಾಕ್ಡೌನ್ ಈಗ ಅವಶ್ಯಕತೆ ಇತ್ತು. ಆದರೆ ಕಾಲ ಮಿಂಚಿ ಹೋಗಿದೆ. ಬೆಂಗಳೂರಿನಲ್ಲಿ ಕರೊನಾ ದೊಡ್ಡಮಟ್ಟದಲ್ಲಿ ಸ್ಫೋಟವಾಗಿದೆ. ಜನ ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ. ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಅವರಿಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು. ಸರ್ಕಾರ ಆ ಕೆಲಸ ಮಾಡಲಿಲ್ಲ, ಜನ ಇದರಿಂದ ಬೆಂಗಳೂರು ಬಿಡುತ್ತಿದ್ದಾರೆ ಎಂದು ಸರ್ಕಾರವನ್ನ ಟೀಕಿಸಿದರು.
ನನ್ನದು ಅವತ್ತು ಸಿಂಗಲ್ ವಾಯ್ಸ್ ಆಗಿಬಿಡ್ತು…
ಸ್ವಾರ್ಥಕ್ಕಾಗಿ ಬೇರೆ ಪಕ್ಷಗಳ ಜೊತ ಸಖ್ಯ ಬೇಡ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ ಅಂಥ ನಾನೇ ಹೇಳಿದ್ದೆ. ಅವತ್ತೂ ಯಾರು ನನ್ನ ಮಾತು ಕೇಳಲಿಲ್ಲ. ನನ್ನದು ಅವತ್ತು ಸಿಂಗಲ್ ವಾಯ್ಸ್ ಆಗಿಬಿಡ್ತು. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ರೆ 7 ರಿಂದ 8 ಸ್ಥಾನ ಗೆಲ್ಲುತ್ತಿದ್ದವು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರೆಸ್ಟ್ ಮಾಡೋಣ ಅಂತ ಮೈಸೂರಿಗೆ ಬಂದಿದ್ದೆ…
ತಾವು ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ ಎಂಬ ಸುದ್ಧಿ ಹರಡಿದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾನು ರೆಸ್ಟ್ ಮಾಡೋಣ ಅಂತ ಮೈಸೂರಿಗೆ ಬಂದಿದ್ದೆ. ಅದನ್ನೇ ಕೆಲವರು ಸೆಲ್ಫ್ ಕ್ವಾರಂಟೈನ್, ಅದು ಇದು ಭಯ ಅಂತ ಸುದ್ದಿ ಹಬ್ಬಿಸಿದ್ರು. ಈ ಕಾರಣ ಇವತ್ತೇ ವಾಪಾಸ್ ಬೆಂಗಳೂರಿಗೆ ಹೋಗ್ತಿದ್ದೀನಿ. ರೆಸ್ಟ್ ಅಂದ್ರೆ ಪರವಾಗಿಲ್ಲ. ಕ್ವಾರಂಟೈನ್ ಅಂದ್ರೆ ಬೇರೆ ಅರ್ಥ ಬರುತ್ತೆ ಅಲ್ವಾ? ಅದಕ್ಕೆ ವಾಪಾಸ್ ಹೋಗುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಎಲ್ ಕೆಜಿಯಿಂದಲೇ ಆನ್ಲೈನ್ ಶಿಕ್ಷಣಕ್ಕೆ ಚಿಂತನೆ ವಿಚಾರ ಸಂಬಂಧ ಮಾತನಾಡಿದ ಸಿದ್ದರಾಮಯ್ಯ. ಬಹಳ ತಜ್ಞರು ಆನ್ ಲೈನ್ ಶಿಕ್ಷಣಕ್ಕೂ ವಿರೋಧ ಮಾಡಿಲ್ಲ. ಆದರೆ ಇದರಿಂದ ವಿದ್ಯಾರ್ಥಿಗಳ ಮನೋವಿಕಾಸ ಆಗಲ್ಲ ಅಂತ ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದರು.
Key words: Covid- Control –Cost-Former CM -Siddaramaiah –demands- govrnament