ಕೋವಿಡ್ ಗೆ ಬಲಿಯಾದವರ ಮೃತದೇಹ ನೀಡಲು ಸತಾಯಿಸಬೇಡಿ : ಖಾಸಗಿ ಆಸ್ಪತ್ರೆಗಳಿಗೆ ತಾಕೀತು.

 

ಮೈಸೂರು, ಮೇ 23, 2021 : (www.justkannada.in news) ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿ ಮೃತದೇಹ ನೀಡಲು ಸತಾಯಿಸದೆ, ರೋಗಿ ಕುಟುಂಬದ ಜತೆಗೆ ಮಾನವೀಯತೆಯಿಂದ ವರ್ತಿಸಿ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗೆ ತಾಕೀತು.

ಕೋವಿಡ್ ಕೇರ್ ಹಾಸಿಗೆ ನಿರ್ವಹಣೆ ಕುರಿತು ಮುಡಾ ಹಾಗೂ ಕೋವಿಡ್ -19 ಹಾಸಿಗೆ ನಿರ್ವಹಣೆ ಅಧ್ಯಕ್ಷರೂ ಆಗಿರುವ ಎಚ್.ವಿ.ರಾಜೀವ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ತಾಕೀತು.

jk

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಆಡಳಿತಾಧಿಕಾರಿಗಳು ಸಭೆಯಲ್ಲಿ ಭಾಗಿ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ನೀಡದ ವಿಚಾರ ಪ್ರಸ್ತಾಪಿಸಿ, ಖಾಸಗಿ ಆಸ್ಪತ್ರೆಗಳು ರೋಗಿಗಳು ಹಾಗೂ ಕುಟುಂಬ ವರ್ಗದ ಜೊತೆ ಮಾನವೀಯತೆಯಿಂದ ವರ್ತಿಸಬೇಕು. ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಹಣದ ಬೇಡಿಕೆ ಇಟ್ಟು ಶವ ನೀಡದೇ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಅಧ್ಯಕ್ಷ ರಾಜೀವ್ ಎಚ್ಚರಿಕೆ ನೀಡಿದರು.

mysore-urban-development-authority-MUDA-rajeev-president

ಬೆಡ್ ನೀಡುವ ವಿಚಾರದಲ್ಲಿ ಪಾರದರ್ಶಕತೆ ಇರಲಿ. ವಾರ್ ರೂಂ ನಿಂದ ನೊಂದಣಿಯಾದವರಿಗೆ ಶೇ.50ರಷ್ಟು ಬೆಡ್ ನೀಡಬೇಕು. ಪ್ರತಿದಿನ ಬೆಡ್, ಐಸಿಯು, ವೆಂಟಿಲೇಟರ್ ಬಗ್ಗೆ ಮಾಹಿತಿ ನೀಡಿ ಎಂದು ಆಸ್ಪತ್ರೆಗಳಿಗೆ ತಾಕೀತು ಮಾಡಿದ ರಾಜೀವ್.
ಕೊರೊನಾ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಎದುರಿಸಲು ಖಾಸಗಿ ಆಸ್ಪತ್ರೆಗಳೂ ಸಿದ್ದವಾಗಬೇಕು. ಸಭೆಯಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಕಿವಿಮಾತು.

—————–

key words : covid-corona-death-private-hospitals-mysore