ಮೈಸೂರು,ಜುಲೈ,27,2021(www.justkannada.in): ಕಳೆದ ಜೂನ್ ನಲ್ಲಿ ಕೋವಿಡ್ ನಿಂದ ಮೃತಪಟ್ಟ ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ನೌಕರರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಣೆ ಮಾಡಲಾಯಿತು.
ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಸಭಾಂಗಣದಲ್ಲಿ ಮೈಸೂರು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರ ಮೇಯರ್ ಅನ್ವರ್ ಬೇಗ್ ಅವರು ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಿದರು.
ವಾಣಿ ವಿಲಾಸ ನೀರು ಸರಬರಾಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಲ್ ಮ್ಯಾನ್ ಗಳಾದ ಬಿ.ಡಿ. ಮಂಜುನಾಥ್ (54), ಅಲ್ತಾಫ್ (34) ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಇದೀಗ ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಕೊರೋನಾದಿಂದಾಗಿ 7 ಮಂದಿ ಪಾಲಿಕೆ ನೌಕರರು ಮೃತ ಪಟ್ಟಿದ್ದಾರೆ. ಎಲ್ಲರಿಗೂ ಪಾಲಿಕೆ ವ್ಯಾಪ್ತಿಯಲ್ಲಿ ತಲಾ 5 ಲಕ್ಷ ರೂ. ಪರಿಹಾರ ಮೊತ್ತವನ್ನ ನೀಡಿದ್ದೇವೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದಲೇ ಸುಮಾರು 30 ಲಕ್ಷ ಪರಿಹಾರ ಹಣ ಬರುತ್ತೆ. ಆದ್ರೇ ನಮ್ಮ ಪಾಲಿಕೆ ವ್ಯಾಪ್ತಿಯ ನೌಕರರನ್ನು ಸಹ ಆ ವ್ಯಾಪ್ತಿಗೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದರು.
ಕೊರೊನಾ 3ನೇ ಅಲೆ ಎದುರಿಸಲು ಪಾಲಿಕೆ ಸಿದ್ದವಾಗಿದೆ. 2ನೇ ಅಲೆಯ ಸಂದರ್ಭದಲ್ಲಿ ಮಾಡಿಕೊಂಡಿದ್ದ ವ್ಯವಸ್ಥೆಗಳನ್ನು ಮುಂದುವರೆಸಿದ್ದೇವೆ. ಎಲ್ಲಾ ಕೋವಿಡ್ ಸೆಂಟರ್, ಟೆಸ್ಟಿಂಗ್ ಸೆಂಟರ್ ಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ನಡೆಯುತ್ತಿದೆ. ಜಿಲ್ಲಾಡಳಿತ ಕೂಡಾ ಸಮರ್ಪಕವಾಗಿ ವ್ಯಾಕ್ಸಿನ್ ನೀಡುತ್ತಿದೆ ಎಂದು ಲಕ್ಷ್ಮೀ ಕಾಂತರೆಡ್ಡಿ ಮಾಹಿತಿ ನೀಡಿದರು.
ENGLISH SUMMARY…..
Distribution of compensation to the kith of MCC employees who died from COVID
Mysuru, July 27, 2021 (www.justkannada.in): A sum of Rs. 5 lakh compensation was distributed to the kith of employees of the Mysore City Corporation who lost their lives due to the COVID-19 Pandemic in the month of June 2020.
Hon’ble Mayor (In-charge) Anwar Baig distributed the cheques to the family members of the deceased at a program held under the leadership of MCC Commissioner Lakshmikanth Reddy, at the Vanivilas Water Supply Board auditorium.
B.D. Manjunath (54) and Altaf (34) who were working as valve men at the Vanivilas Water Supply Board had lost their lives due to the COVID-19 Pandemic. A cheque for a sum of Rs. 5 lakh was distributed to their family members.
Speaking on the occasion MCC Commissioner Lakshmikanth Reddy informed that MCC is ready to face the Corona 3rd wave and all the arrangements which were made during the 2nd wave have been continued. “All the COVID care centers, testing centers are functioning. Above four thousand COVID tests’ are done every day in Mysuru. The District Administration is also handling vaccination campaign effectively,” he informed.
Keywords: Mysore City Corporation/ compensation/ cheques/ COVID-19 Pandemic/ deceased/ family members
Key words: covid –death- mysore-city –corporation-Employees-Distribution – cheque