ಮೈಸೂರು,ಏಪ್ರಿಲ್,30,2021(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 14 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಕೋವಿಡ್ ಸಹಾಯವಾಣಿ ತೆರೆಯಲು ಮುಂದಾಗಿದೆ.
ನಾಳೆಯಿಂದ ಪ್ರತಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾಹಿತಿ ನೀಡಿದ್ದಾರೆ. ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆರ್.ಧೃವನಾರಾಯಣ್, ಕೋವಿಡ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮೊದಲ ಅಲೆ ಸಂದರ್ಶನದಲ್ಲಿ ಅಧ್ಯಕ್ಷರ ಡಿ ಕೆ ಶಿವಕುಮಾರ್ ವಿನೂತನ ಕಾರ್ಯಕ್ರಮ ಕೊಟ್ಟಿದ್ದರು. ಆರೋಗ್ಯ ಹಸ್ತಕಾರ್ಯಕ್ರಮ ಮಾಡಿದ್ದೆವು. ಪ್ರತಿಹಳ್ಳಿಗೆ ಹೋಗಿ ತಪಾಸಣೆ ಮಾಡಲಾಗಿತ್ತು. 6 ಕೋಟಿ ಹಣ ವೆಚ್ಚಮಾಡಿ ಕಿಟ್ ವಿತರಣೆ ಮಾಡಿದ್ವಿ.
ಈಗ ಎರಡನೇ ಅಲೆ ಬಹಳ ಭೀಕರವಾಗಿದೆ. ರಾಜಕೀಯ ಪಕ್ಷವಾಗಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಕಾಂಗ್ರೆಸ್ ವರಿಷ್ಠರು ಜೂಮ್ ಮೀಟಿಂಗ್ ಮೂಲಕ ಸಲಹೆ ನೀಡಿದ್ದಾರೆ. ಆರೋಗ್ಯ ಸಹಾಯವಾಣಿ ಕಾರ್ಯಕ್ರಮ ಕಾಂಗ್ರೆಸ್ ಆರಂಭ ಮಾಡುತ್ತಿದೆ. 320/ವೈಧ್ಯರು ಸ್ವಯಂ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸಹಾಯವಾಣಿ ಆರಂಭವಾಗಲಿದೆ. ನಾಳೆ 11 ಗಂಟೆಗೆ ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಸಹಾಯವಾಣ ಆರಂಭವಾಗಲಿದೆ. ಪ್ರತಿ ಜಿಲ್ಲೆಯಲ್ಲಿ ಏಕಕಾಲದಲ್ಲಿ ಮಾಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.
ನಾನು ಸರ್ಕಾರವನ್ನು ಟೀಕೆ ಮಾಡುವುದಿಲ್ಲ. ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ವಿನಯೋಗ ಮಾಡುವಂತೆ ಒತ್ತಾಯ ಮಾಡುತ್ತೇವೆ. ಬೇರೆ ಎಲ್ಲ ಇಲಾಖೆಯ ಅನುದಾನ ಕಡಿತ ಮಾಡಿ ಆರೋಗ್ಯ ಕ್ಷೇತ್ರಕ್ಕೆ ನೀಡಬೇಕು ಎಂದು ಧೃವನಾರಾಯಣ್ ಆಗ್ರಹಿಸಿದರು.
ಸಂಕಷ್ಟದಲ್ಲಿರುವ ರೈತರು, ಅಸಂಘಟಿತ ವಲಯಗಳ ನೆರವಿಗೆ ಧಾವಿಸಲಿ..
ಮಾಜಿ ಪ್ರದಾನಿ ಮನಮೋಹನ್ ಸಿಂಗ್ ವ್ಯಾಕ್ಸಿನೇಷನ್ ವಿಚಾರದಲ್ಲಿ ಪತ್ರ ಬರೆದಿದ್ರು. ಎಲ್ಲಾ ಜನರಿಗೂ ಉಚಿತವಾಗಿ ವ್ಯಾಕ್ಸಿನೇಷನ್ ನೀಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ನೀಡಬೇಕು ಎಂಬ ಸಲಹೆ ನೀಡಿದರು. ಅವರ ಪತ್ರಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡಿಲ್ಲ. ಒಟ್ಟು ಐದು ಕೆಜಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಿಬೇಕು. ಉದ್ಯೋಗ ಖಾತ್ರಿ ಯೋಜನೆ ಬಾಕಿ ಹಣ ಬಿಡುಗಡೆ ಮಾಡಬೇಕು. ವರ್ಷದ 100 ದಿನ ಕೂಲಿಯನ್ಮ 150. ದಿನಗಳಿಗೆ ಏರಿಸಬೇಕು. ಪ್ರತಿ ದಿನದ ಕೂಲಿಯಲ್ಲಿ 289 ರೂ ನಿಂದ 350 ರೂ ಗಳಿಗೆ ಹೆಚ್ಚಳ ಮಾಡಬೇಕು. ಇನ್ನೂ ಕೂಡ ಸರ್ಕಾರ ಗಂಜಿಕೇಂದ್ರ ತೆರೆದಿಲ್ಲ. ಸಂಘ ಸಂಸ್ಥೆ, ವ್ಯಾಪಾರಸ್ತರು ಇತರರ ಸಹಾಯ ಪಡೆದು ಗಂಜಿ ಕೇಂದ್ರ ತೆರೆಯಬೇಕು. ಅಸಂಘಟಿತ ವಲಯಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಅಸಂಘಟಿತ ವಲಯಕ್ಕೆ ಸರ್ಕಾರ ಸಹಾಯಧನ ನೀಡಬೇಕು ಎಂದು ಧೃವನಾರಾಯಣ್ ಒತ್ತಾಯಿಸಿದರು.
ರೈತರು ಸಾಲ ಸೋಲ ಮಾಡಿ ಬೆಳೆ ಬೆಳೆದಿದ್ದಾರೆ. ಅವರು ಬೆಳೆ ಮಾರಾಟ ಮಾಡಲು ಆಗ್ತಾ ಇಲ್ಲ. ಇದರಿಂದ ಆತ್ಮಹತ್ಯೆ ಹಾದಿ ಹಿಡಿದರೂ ಆಶ್ಚರ್ಯ ಇಲ್ಲ. ಸರ್ಕಾರ ರೈತರಿಗೆ ಸಹಾಯದ ಧನ ಕೂಡಲೆ ನೀಡಬೇಕು ಎಂದು ಹೇಳಿದರು.
ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ
ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಡ್ ಗಳು ಸಿಗುತ್ತಿಲ್ಲ. ಆಕ್ಸಿಜನ್ ಸಿಗುತ್ತಿಲ್ಲ. ಇದಕ್ಕೆ ಕೂಡಲೆ ಕೇಂದ್ರ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಂಸದರು ಯಾರೂ ಚಕಾರ ಎತ್ತುತ್ತಿಲ. ಕೇವಲ ಭ್ರಷ್ಠಾಚಾರದಲ್ಲಿ ಸರ್ಕಾರ ತೊಡಗಿದೆ. ವಿಶ್ವನಾಥ್, ಬಸವರಾಜ್ ಪಾಟೀಲ್ ಯತ್ನಳ್ ಸರ್ಕಾರ ಭ್ರಷ್ಟಾಚಾರ ವಿರುದ್ದ ಬೆಳಕು ಚೆಲ್ಲಿದ್ದಾರೆ ಎಂದರು.
ಸರ್ಕಾರಿ ಅಧಿಕಾರಿಗಳೊಂದಿಗೆ ಸಿಎಂ ಪುತ್ರ ವಿಜಯೇಂದ್ರ ಸಭೆ ಕಾನೂನು ಬಾಹಿರ.
ಸರ್ಕಾರಿ ಅಧಿಕಾರಿಗಳೊಂದಿಗೆ ಸಿಎಂ ಪುತ್ರ ವಿಜಯೇಂದ್ರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಇದು ಕಾನೂನು ಬಾಹಿರ. ಗುಲಾಮಗಿರಿ ಸಂಸ್ಕೃತಿ ಇದು. ಅವರು ಪಕ್ಷದ ಕಚೇರಿಯಲ್ಲಿ ಅವರು ತಮ್ಮ ಶಾಸಕರನ್ಮ ಕರೆದು ಸಭೆ ಮಾಡಲಿ. ಸಿಎಂ ಯಡಿಯೂರಪ್ಪ ತಮ್ಮ ಕುಟುಂಬ ವರ್ಗವನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಅಸಂವಿಧಾನಕವಾಗಿ ನಡೆದುಕೊಂಡರೆ ಅಧಿಕಾರಿಗಳ ನೈತಿಕತೆ ಕುಗ್ಗಲಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
Key words: covid helpline – congress office- tomorrow-KPCC- work-President –R.Dhruvanarayan