ಬೆಂಗಳೂರು,ಜನವರಿ,14,2022(www.justkannada.in): ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥಪಡಿಸಿದ ರಾಜ್ಯ ಹೈಕೋರ್ಟ್, ಕೋವಿಡ್ ಸಮಯದಲ್ಲಿ ಯಾವುದೇ ರ್ಯಾಲಿ ಸಭೆ,ಸಮಾರಂಭಗಳಿಗೆ ಅವಕಾಶ ಕೊಡಬೇಡಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಪಾದಯಾತ್ರೆ ಸ್ಥಗಿತಗೊಳಿಸಲು ಮನವಿ ಮಾಡಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಈ ಮಧ್ಯೆ ಪಾದಯಾತ್ರೆ ತಡೆಯಲು ಸರ್ಕಾರದ ಕ್ರಮಗಳೇನು ಎಂದು ಪ್ರಶ್ನಿಸಿದ್ಧ ಹೈಕೋರ್ಟ್ ಉತ್ತರಿಸಲು ಸರ್ಕಾರಕ್ಕೆ ಒಂದು ದಿನ ಕಾಲಾವಕಾಶ ನೀಡಿತ್ತು.
ಇದೀಗ ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಿರುವ ಬಗ್ಗೆ ಹೈಕೋರ್ಟ್ ಗೆ ಕಾಂಗ್ರೆಸ್ ಪರ ವಕೀಲರು ವರದಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಕಾಂಗ್ರೆಸ್ ಪಾದಯಾತ್ರೆ ಮುಂದೂಡಲಾಗಿದೆ ಆದರೆ ಬೇರೆ ಪಕ್ಷಗಳ ಕಾರ್ಯಕ್ರಮಗಳು ನಡೆಯುತ್ತಿವೆ. ಸರ್ಕಾರದ ತಾರತಮ್ಯ ನೀತಿ ಪರಿಗಣಿಸಲು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪಿಐಎಲ್ ಇತ್ಯರ್ಥಗೊಳಿಸಿದ ಹೈಕೋರ್ಟ್. ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಡಿ ಜ.4 ರ ಗೈಡ್ ಲೈನ್ಸ್ ಕಟ್ಟು ನಿಟ್ಟಾಗಿ ಜಾರಿ ಮಾಡಿ. ಕೊರೋನಾ ಸಮಯದಲ್ಲಿ ಯಾವುದೇ ರ್ಯಾಲಿ ಧರಣಿಗೆ ಅವಕಾಶ ಕೊಡಬೇಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
Key words: covid-High Court -direction – Govt.
ENGLISH SUMMARY…
HC instructs govt. to prevent rallies, public functions
Bengaluru, January 14, 2022 (www.justkannad.in): The Hon’ble High Court of Karnataka, in its judgment with respect to the public interest litigation submitted questioning the Mekedatu project padayatra by the Congress, has issued orders to the State Government not to allow any kind of rallies or public functions.
A PIL was submitted in the high court questioning the Mekedatu project padayatra organized by the Congress party in the State and to stop it. The hon’ble high court had questioned the State Government what measures have it taken to prevent the padayatra and had given one day’s time to answer.
However, the advocate representing the Congress party has submitted a report to the High Court about withdrawing the padayatra. The advocate representing the Congress party Uday Holla in his argument submitted that though the padayatra is stopped several other public programs of other parties have continued and appealed to the hon’ble court to consider the biased attitude of the State Government. In this regard, the High Court has instructed the State Government not to allow any public functions and implement the January 4 guidelines strictly. It also informed not to give permission to conduct any protest rallies.
Keywords: High Court/ Congress/ Padayatra/ orders to prevent rallies/ public programs