ನವದೆಹಲಿ,ಆಗಸ್ಟ್,11,2022(www.justkannada.in): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ನವದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 17.83 ಇದ್ದು, ಕೊರೋನಾ ಹೆಚ್ಚಳ ಹಿನ್ನೆಲೆ ಮಾಸ್ಕ್ ಕಡ್ಡಾಯಗೊಳಿಸಿ ಅಲ್ಲಿನ ಸರ್ಕಾರ ಆದೇಶಿಸಿದೆ. ಒಂದು ವೇಳೆ ಮಾಸ್ಕ್ ದರಿಸದಿದ್ದರೇ 500 ರೂ. ದಂಡ ವಿಧಿಸುವುದಾಗಿ ಸರ್ಕಾರ ತಿಳಿಸಿದೆ.
ಖಾಸಗಿ ನಾಲ್ಕು-ಚಕ್ರಗಳ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಈ ದಂಡ ಅನ್ವಯಿಸುವುದಿಲ್ಲ. ಬುಧವಾರದಂದು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೨,೧೪೬ ದಾಖಲಾಗುವುದರೊಂದಿಗೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತು. ಅದರ ಹಿಂದಿನ ದಿನ, ಅಂದರೆ ಮಂಗಳವಾರ ೨,೪೯೫ ಪ್ರಕರಣಗಳು ದಾಖಲಾಗಿದ್ದವು. ಸಾವಿನ ಸಂಖ್ಯೆ ೮ಕ್ಕೆ ಏರಿಕೆಯಾಗಿದೆ, ಹಿಂದಿನ ದಿನ ಏಳು ಸಾವುಗಳು ಸಂಭವಿಸಿದ್ದವು ಎಂದು ವರದಿಯಾಗಿದೆ.
ಈ ನಡುವೆ, ದೆಹಲಿಯಲ್ಲಿ ಕೋವಿಡ್-೧೯ ಪಾಸಿಟಿವಿಟಿ ಪ್ರಮಾಣ ಶೇ.೧೭.೮೩ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೮,೨೦೫ರಷ್ಟಿದೆ. ಈ ಪೈಕಿ ೫,೫೪೯ ರೋಗಿಗಳನ್ನು ಐಸೊಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Key words: Covid –increase-Govt – masks- mandatory – Delhi.