ಆಸ್ಟ್ರೇಲಿಯಾ, ಏಪ್ರಿಲ್ 27, 2021 (www.justkannada.in): ಪ್ರಪಂಚದ ಎರಡನೆಯ ಅತೀ ಹೆಚ್ಚು ಜನಸಂಖ್ಯೆಯಿರುವ ದೇಶ ಭಾರತದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿ ಆಸ್ಟ್ರೇಲಿಯಾ ಭಾರತದಿಂದ ಆಗಮಿಸುವ ನೇರ ವಿಮಾನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಭಾರತದಲ್ಲಿ ಕೆಲವು ದಿನಗಳಿಂದ ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೋವಿಡ್ ಸೋಂಕಿನಿಂದಾಗಿ ಒಂದೇ ದಿನದಲ್ಲಿ 2,771 ಸಾವುಗಳು ಸಂಭವಿಸಿವೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಅಲ್ಲಿನ ಸುದ್ದಿಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ಆಗಮಿಸುವ ವಿಮಾನಗಳನ್ನು ನಿಷೇಧಿಸುತ್ತಿದ್ದು, ಈ ನಿಷೇಧ ಮೇ 15ರವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಭಾರತದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತೆರಳುವ ಎರಡು ಪ್ಯಾಸೆಂಜರ್ ಸೇವಾ ವಿಮಾನಗಳು ಹಾಗೂ ಭಾರತದಿಂದ ಡಾರ್ವಿನ್‌ಗೆ ತೆರಳುವ ಎರಡು ವಿಮಾನಗಳ ಸೇವೆಗಳ ಮೇಲೆ ಇದು ಪರಿಣಾಮ ಬೀರಿದೆ.
“ನ್ಯೂ ಸೌತ್ ವೇಲ್ಸ್ ಸ್ಟೇಟ್ ಹಾಗೂ ಉತ್ತರ ಆಸ್ಟೆçÃಲಿಯಾದ ಹಲವು ಭಾಗಗಳಲ್ಲಿ ಇತ್ತೀಚೆಗೆ ವರದಿಯಾಗಿರುವ ಬಹುಪಾಲು ಕೋವಿಡ್ ಪಾಸಿಟಿವ್ ಪ್ರಕರಣಗಳು ಭಾರತದಿಂದ ಆಗಮಿಸುವವರಿಂದ ಹರಡಿದೆ. ಹಾಗಾಗಿ ಈ ಭಾಗಗಳಲ್ಲಿನ ಕ್ವಾರಂಟೈನ್ ಸೌಲಭ್ಯಗಳ ಮೇಲಿನ ಒತ್ತಡವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆಗೊಳಿಸುವುದು ಈ ನಿಷೇಧದ ಉದ್ದೇಶವಾಗಿದೆ,” ಎಂದು ತಿಳಿಸಿದ್ದಾರೆ.
Key words: Covid- increase –india-Australia- restricted -flights -arriving