ಬೆಂಗಳೂರು,ಮೇ,6,2021(www.justkannada.in): ಆಸ್ಪತ್ರೆಗಳಲ್ಲಿ ಬೆಡ್ ವೆಂಟಿಲೇಟರ್ ಸಿಗದ ಹಿನ್ನೆಲೆ ಕೊರೋನಾ ಸೋಂಕಿತನ ಪತ್ನಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಮುಂದೆ ಧರಣಿ ಮಾಡಿ ಅಳಲು ತೋಡಿಕೊಂಡ ಘಟನೆ ನಡೆಯಿತು.
ಆದರೆ ಕೊನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಬೆಡ್ ವ್ಯವಸ್ಥೆ ಮಾಡಿದರೂ ಸಹ ಕೊರೋನಾ ಸೋಂಕಿತ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿದ್ದಾರೆ. ಸತೀಶ್ ಎಂಬುವವರಿಗೆ ಕೊರೋನಾ ಸೋಂಕು ತಗುಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು.
ಈ ನಡುವೆ ಪತಿಯನ್ನ ಉಳಿಸಿಕೊಳ್ಳಲು ಪತ್ನಿ ಆಸ್ಪತ್ರಗಳೆಲ್ಲಾ ಅಲೆದರೂ ಬೆಡ್ ಸಿಗಲಿಲ್ಲ. ಹೀಗಾಗಿ ಕೋವಿಡ್ ಸೋಂಕಿತನ ಪತ್ನಿ ಪತಿಯ ಜತೆ ಸಿಎಂ ನಿವಾಸ ಕಾವೇರಿಗೆ ಬಂದು ಬೆಡ್ ಕೊಡಿಸುವಂತೆ ಧರಣಿ ನಡೆಸಿ ಅಳಲು ತೋಡಿಕೊಂಡಿದ್ದರು. ನನ್ನ ಪತಿಗೆ ವೆಂಟಿಲೇಟರ್ ,ಐಸಿಯು, ಬೆಡ್ ಸಿಗುತ್ತಿಲ್ಲ. ನಾವು ದುಡ್ಡು ಕೊಡುತ್ತೇವೆ ಬೆಡ್ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದರು.
ಕೊರೋನಾ ಸೋಂಕಿತನ ಕುಟುಂಬದ ಸಮಸ್ಯೆ ಸ್ಪಂದಿಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಸೋಂಕಿತ ಸತೀಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Key words: Covid -infected -wife –protest-CM residence- CM -bed arrangement