ಬೆಂಗಳೂರು,ಜು,4,2020(www.justkannada.in): ಕೊವಿಡ್ 19 ರಾಜ್ಯವನ್ನ ಸಂಪೂರ್ಣ ತಲ್ಲಣಗೊಳಿಸಿದೆ. ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ರಾಜ್ಯದ ಎಲ್ಲ ಜನರಿಗೂ ಕೋವಿಡ್ ವಿಮೆಯನ್ನು ಮಾಡಿಸಲಿ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಆಗ್ರಹಿಸಿದರು.
ತಮ್ಮ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ಕೆ ಪಾಟೀಲ್ , ಕೊವಿಡ್ ೧೯ ರಾಜ್ಯವನ್ನ ಸಂಪೂರ್ಣ ತಲ್ಲಣಗೊಳಿಸಿದೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷತನವನ್ನ ತೋರಿಸುತ್ತಿದೆ. ಜನರ ಸಮಸ್ಯೆಗೆ ಗಮನವನ್ನೇ ಹರಿಸುತ್ತಿಲ್ಲ. ಟೆಸ್ಟ್ ಮಾಡಿಸುವ ಬಗ್ಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ. ಸಿಎಂಗೆ ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ 40 ಸಾವಿರಕ್ಕೂ ಹೆಚ್ಚು ರಿಸಲ್ಟ್ ವೇಯ್ಟಿಂಗ್ ಇದೆ. ಇದಕ್ಕೆ ನಾವು ಏನನ್ನ ಬೇಕು. ಯಾವ ಚಾಟಿಯಿಂದ ಸರ್ಕಾರಕ್ಕೆ ಬೀಸಬೇಕು. ನಾವು ಟೀಕೆ,ವಿಮರ್ಶೆ ಮಾಡುವುದು ಬೇರೆ. ಬೌದ್ಧಿಕ ದಿವಾಳಿತನ ಜನರಿಗೆ ಆಘಾತವನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೋವಿಡ್ ವಿಮೆಯನ್ನು ರಾಜ್ಯದ ಎಲ್ಲ ಜನರಿಗೂ ಮಾಡಿಸಬೇಕು. ರಾಜ್ಯ ಸರ್ಕಾರ ಕೊವಿಡ್ ವಿಮೆ ಮಾಡಿಸಬೇಕು. ಇದಕ್ಕೆ 2ಸಾವಿರ ಕೋಟಿ ವೆಚ್ಚ ಆಗುತ್ತದೆ. ಕೊರೋನಾದಿಂದ ಜನ ಸತ್ತು ಬೀಳುತ್ತಿದ್ದರೂ ಸರ್ಕಾರಕ್ಕೆ ದಯೆ ಬಂದಿಲ್ಲ. ೀ ಕೂಡಲೇ ಸಿಎಂ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಕೆಟ್ಟ ಶಕುನಗಳು ನೋಡುತ್ತಿದ್ದೇವೆ. ಇಟಲಿ, ನ್ಯೂಯಾರ್ಕ್ ಪಟ್ಟಣಗಳು ಏನಾಗಿವೆ? ಇಂತಹ ಸಂಕಷ್ಟದ ಸಂದರ್ಭ ದಲ್ಲಿ ಭ್ರಷ್ಟಾಚಾರ ಮಾಡುವವರನ್ನು ಹೇಗೆ ಸಹಿಸಬೇಕು? ಜನ ರೊಚ್ಚಿಗಿದ್ದು, ಬಾರು ಕೋಲು ಹಿಡಿಯಲಿದ್ದಾರೆ. ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ ಸಹಿಸತಕ್ಕದಲ್ಲ. ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಬದುಕು ಉಳಿಸಿ. ಈವರೆಗೂ ಕಮ್ಯೂನಿಟಿ ಸ್ಪ್ರೆಡ್ ಆಗಿಲ್ಲ ಅಂತಿರಾ..? ನಿರ್ಲಕ್ಷ್ಯ ಮುಂದುವರಿದರೆ ಜನರ ಆಕ್ರೋಶಕ್ಕೆ ತುತ್ತಾಗುವಿರಿ ಎಂದು ಹೆಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದರು.
Key words: covid insurance – all people -Former minister -HK Patil