ಬೆಂಗಳೂರು,ಏಪ್ರಿಲ್,15,2021(www.justkannada.in): ಕೊರೋನಾ ವಿಚಾರದಲ್ಲಿ ಜನ ಆತಂಕಗೊಂಡಿದ್ದಾರೆ. ವಿಪಕ್ಷಗಳು ರಾಜಕೀಯ ಬಿಟ್ಟು ಸರ್ಕಾರದ ಜತೆ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಕೊರೋನಾ ವಿಷಯದಲ್ಲಿ ರಾಜಕಾರಣ ಮಾಡಬಾರದು. ಜನರು ಆತಂಕಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಕೊರತೆ ಇಲ್ಲ. ಅಕ್ಸಿಜನ್ ಕೊರತೆ ಸಹ ಇಲ್ಲ. ರಾಜ್ಯದಲ್ಲಿ ಕೊರೊನಾ ಪ್ರಮಾಣ ವ್ಯಾಪಿಸಿಲ್ಲ. ಕೊರೋನಾ ಪ್ರಮಾಣ 0.5 ರಿಂದ 0.6 ರಷ್ಟಿದೆ ಎಂದರು.
ಏಪ್ರಿಲ್ 18 ರಂದು ಸರ್ವಪಕ್ಷಗಳ ಸಭೆ ನಡೆಯಲಿದ್ದು, ಕೊರೊನಾ ನಿಯಂತ್ರಣ ಸಂಬಂಧ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ENGLISH SUMMARY….
Minister K. Sudhakar appeals opposition parties to join hands with the State Govt. in preventing COVID-19 Pandemic
Bengaluru, Apr. 15, 2021 (www.justkannada.in): “People have started panicking about the second wave of COVID-19 Pandemic. I appeal the opposition parties to join hands with the State Govt. in controlling the pandemic instead of doing politics,” said Health and Medical Education Minister K. Sudhakar.
Speaking to the press persons about this today in Bengaluru he said nobody should do politics in Corona matter. People are panicking. There is no shortage of Remdesivir injections or oxygen in hospitals. Corona has not spread too much, it is around 0.5 to 0.6 percent, he explained.
“An all-party meeting will be held on April 18 to discuss the possible measures to be taken to control the pandemic after which further decisions will be taken,” he added.
Keywords: Health and Medical Education Minister/ Govt. of Karnataka/ Dr. K. Sudhakar/ COVID-19 Pandemic/ no politics
Key words: covid- left -politics -joined – government-Ministe-r Sudhakar -advice