ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಮೈಸೂರು ಜಿಲ್ಲೆಗೆ ಪ್ರವೇಶ : ಸಚಿವ ಎಸ್.ಟಿ.ಸೋಮಶೇಖರ್

 

ಮೈಸೂರು, ಜುಲೈ. 07, 2021 : (www.justkannada.in news) ಕೇರಳ ಗಡಿಯಿಂದ ಜನರು ಮೈಸೂರು ಜಿಲ್ಲೆಗೆ ಬರಬೇಕೆಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಶನಿವಾರ ಮೈಸೂರು ಜಿಲ್ಲೆಯ ಗಡಿಭಾಗ ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿ ಹೇಳಿದಿಷ್ಟು…

jk

ನಿನ್ನೆ ಚಾಮರಾಜನಗರದಲ್ಲಿ ಕೋವಿಡ್ ಸಭೆ ನಡೆಸಿ, ಅಲ್ಲಿನ ಗಡಿ ಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೆನೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಇಲ್ಲಿನ ಸಮಸ್ಯೆಗಳನ್ನು ಮನಗಂಡು ಶೆಡ್ ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ ಫಲವಾಗಿ ವೈದ್ಯರಿಗಾಗಿ ಶೆಡ್ ಅನ್ನು ನಿರ್ಮಿಸಲಾಗಿದೆ.

ಕೋವಿಡ್ 3ನೇ ಅಲೆ ಬರಬಹುದೆಂಬ ದೃಷ್ಟಿಯಿಂದ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲೆ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೇಚ್ಚರವನ್ನು ವಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಅನ್ನು ಕಡಿಮೆ ಮಾಡಿಲ್ಲ. ಪ್ರತಿನಿತ್ಯ 10 ಸಾವಿರ ಕೋವಿಡ್ ಟೆಸ್ಟ್ ನಡೆಯುತ್ತಿದೆ.

Dilapidated-Medical-College-Hostel-Building-Minister-S.T.Somashekhar-reviewed

ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಗೆ ಸಂಬಂಧಪಟ್ಟಂತೆ ಯಾವುದೇ ಕೊರತೆ ಇಲ್ಲ. ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಶೇ.100 ರಷ್ಟು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಕೆಂಡ್ ಕರ್ಫ್ಯೂಗೆ ಸಂಬಂಧಿಸಿದಂತೆ ಸಭೆ ನಡೆಸಿ ಸಾರ್ವಜನಿಕರಿಗೆ ಹಾಗೂ ವ್ಯಾಪರಿಗಳಿಗೆ ತೊಂದರೆಯಾಗದಂತೆ ಮುಂದಿನ ತೀರ್ಮಾನವನ್ನು ಕೈಗೊಂಡು ತಿಳಿಸಲಾಗುವುದು.

ಕಳೆದ ಬಾರಿ ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ಹಾಗೂ ಉದ್ಯಮಕ್ಕೆ ಬಾರಿ ಹೊಡೆತ ಬಿದ್ದಿದೆ. ಈಗ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಪಾಸಿಟಿವ್ ರೆಟ್ ಕಡಿಮೆ ಇರುವುದರಿಂದ ಲಾಕ್ ಡೌನ್ ಮಾಡುವ ಚಿಂತನೆಯಿಲ್ಲ. ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ನಮ್ಮ ಜಿಲ್ಲೆಗೆ ಬರದಂತೆ ನಿಯಂತ್ರಿಸುವ ಸಲುವಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ತಹಶೀಲ್ದಾರ್ ನರಗುಂದ, ಡಿ.ಎಚ್.ಒ ಡಾ. ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

key words : covid-negative-report-must-to-enter-Mysore-border-from-Kerala

 

ENGLISH SUMMARY : 

 

Entry to Mysuru only if you have COVID Negative report: Minister S.T. Somashekar

Mysuru, July 7, 2021 (www.justkannada.in): Mysuru District In-charge Minister S.T. Somashekar has informed that people coming to Mysuru through the Kerala border will be allowed only if they produce COVID Negative report.

He spoke to the press persons during his visit to the Bawali check post located on the border of Mysuru today. “I visited Chamarajanagara yesterday and held a meeting, I also visited the border area there and inspected. The ZP CEO was informed to construct a shed near the Bawali checkpost when I visited during the 2nd wave. As a result, the shed has been built now which will be helpful for the doctors,” he informed.

“We have not reduced the COVID tests in Mysuru district. Every day 10,000 tests are held,” he added. In his reply to the availability of vaccines, he said there is no shortage and also informed that further discussions would be held with the officials concerned with respect to the imposition of weekend curfew.

election-scheduled-currently-villages-included-jurisdiction-Minister-S.T.Somashekhar

“We are not in a position to impose complete lockdown as we still have not recovered from the earlier lockdown. As of now, there is no need to worry as the positivity rate is still less. However the cases are increasing constantly in the neighbouring states, and hence we need to be extra careful,” he said.

ZP CEO A.M. Yogesh, District SP R. Chetan, Tahasildar Naragund, DHO Dr. Prasad, Special Duty Officer Dinesh Gooligowda, and others accompanied him.

Keywords: District In-charge Minister/ S.T. Somashekar/ Bawali checkpost/ COVID/ Negative report compulsory/ entry to Mysuru