ಮೈಸೂರು,ಏಪ್ರಿಲ್,9,2021(www.justkannada.in): ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಹೊರಡಿಸಲಾಗಿದ್ದ ಆದೇಶವನ್ನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಿಂಪಡೆದಿದ್ದಾರೆ. ಜತೆಗೆ ಕೊರೋನಾ ತಡೆಗಾಗಿ ಕಠಿಣ ನಿಯಮ ಜಾರಿಗೊಳಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೊರೋನಾ ಟಫ್ ರೂಲ್ಸ್ ನಿಯಮ ಜಾರಿ ಸಂಬಂಧ ನಿನ್ನೆ ಸುದ್ಧಿಗೋಷ್ಠಿ ನಡೆಸಿದ್ದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಕೊರೊನಾ ಹೆಚ್ಚಳ ಹಿನ್ನೆಲೆ, ಏ.10 ರಿಂದ 20ರವೆರೆಗೆ ಮೈಸೂರಿನ ಪ್ರವಾಸಿ ತಾಣಗಳು, ಟೆಂಪಲ್, ರೆಸಾರ್ಟ್, ಹೊಟೇಲ್, ಚಿತ್ರಮಂದಿರಗಳಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಆದೇಶಿಸಿದ್ದರು. ಹಾಗೆಯೇ ಬೆಂಗಳೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಭೇಟಿ ನೀಡುವ ವ್ಯಕ್ತಿಗಳು ಕೋವಿಡ್-19 ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಸಲಹಾ ಸೂಚನೆ ನೀಡಿದ್ದರು.
ಈ ಬಳಿಕ ಕೊರೊನಾ ಕಠಿಣ ನಿಯಮಗಳ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ತಮ್ಮ ಆದೇಶ ಹಿಂಪಡೆದಿದ್ದಾರೆ.
ತಮ್ಮ ಆದೇಶ ಹಿಂಪಡೆದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಡಿಸಿ ರೋಹಿಣಿ ಸಿಂಧೂರಿ. ಬೆಂಗಳೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಭೇಟಿ ನೀಡುವ ವ್ಯಕ್ತಿಗಳು ಕೋವಿಡ್-19 ನೆಗೆಟಿವ್ ರಿಪೋರ್ಟ್ ಹೊಂದಿರಲು ಸಲಹಾ ಸೂಚನೆ ನೀಡಲಾಗಿತ್ತು. ಸಾರ್ವಜನಿಕರಲ್ಲಿ ಸಲಹಾ ಸೂಚನೆ ಬಗ್ಗೆ ಗೊಂದಲ ಉಂಟಾಗಿದೆ. ಅಲ್ಲದೆ ಸರ್ಕಾರದ ಸುತ್ತೋಲೆಯಲ್ಲಿ ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಆದೇಶಗಳನ್ನು ಹೊರಡಿಸದಂತೆ ಹೇಳಿದೆ. ಈಗಾಗಲೇ ಇಂತಹ ಆದೇಶ, ಸೂಚನೆ ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯಲು ನಿರ್ದೇಶಿಸಿದೆ. ಆದ್ದರಿಂದ ಹೊರಡಿಸಲಾಗಿರುವ ಸಲಹಾ ಸೂಚನೆಯನ್ನು ತಕ್ಷಣದಿಂದ ಹಿಂಪಡೆಯಲಾಗಿದೆ. ಸರ್ಕಾರದ ಸಲಹಾ ಸೂಚನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
Key words: covid Negative –Report- not mandatory – coming – Mysore-DC-Rohini sinduri