ಕೋವಿಡ್ ಹಗರಣ: ತನಿಖಾ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು,ಏಪ್ರಿಲ್,9,2025 (www.justkannada.in):  ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ  ಕೋವಿಡ್ ಹಗರಣ ಸಂಬಂಧ ತನಿಖಾ ಆಯೋಗದ ಅವಧಿಯನ್ನ ಜುಲೈ 31ರವರೆಗೆ  ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ನಿವೃತ್ತ ನ್ಯಾ.ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ವಿಚಾರಣಾ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದವರ ಪ್ರಕರಣ ಸಂಬಂಧ ಪರಿಶೀಲನೆ ನಡೆಯಲಿದ್ದು, ಈ ನಿಟ್ಟಿನಲ್ಲಿ ತನಿಖಾ ಆಯೋಗದ ಅವಧಿಯನ್ನು ಜುಲೈ 31ರವರೆಗೆ   ವಿಸ್ತರಿಸಲಾಗಿದೆ.

Key words: Covid scam,  Inquiry Commission , term, extended