ಬೆಂಗಳೂರು,ಜನವರಿ,22,2022(www.justkannada.in): ತಜ್ಞರು, ಅಧಿಕಾರಿಗಳು, ಸಚಿವರ ಸಲಹೆ ಮೇರೆಗೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ. ಕೋವಿಡ್ ಪರಿಸ್ಥಿತಿ ಕೈಮೀರಿದ್ರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಸರ್ಕಾರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿದೆ. ಸಿಎಂ ಚರ್ಚೆ ಮಾಡಿ ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದಾರೆ. ತಜ್ಞರು, ಅಧಿಕಾರಿಗಳು ಸಲಹೆ ಮೇರೆಗೆ ವೀಕೆಂಡ್ ಕರ್ಫ್ಯು ವಾಪಸ್ ಪಡೆದಿದ್ದಾರೆ. ಸಭೆ ಸಮಾರಂಭಗಳನ್ನ ಅವಶ್ಯಕತೆಗೆ ಅನುಸಾರ ಮುಂದೂಡಿ. ರೋಗದ ಲಕ್ಷಣ ಇದ್ದರೇ ಟೆಸ್ಟ್ ಮಾಡಿಸಿ ಎಂದು ಸಲಹೆ ನೀಡಿದರು.
ಜನರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಪರಿಸ್ಥಿತಿ ಕೈಮೀರಿದರೇ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದ್ರೆ ಬೇರೆ ದಾರಿ ಇಲ್ಲ ಎಂದರು.
ಸಚಿವ ಸಂಪುಟ ಪುನರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೊರೊನಾ ಸುಳಿಯಲ್ಲಿ ಸಿಲುಕಿದ್ದೇವೆ. ಸದ್ಯ ರಾಜಕೀಯದ ಕಡೆ ಗಮನ ಹರಿಸಿಲ್ಲ ಎಂದರು.
Key words: covid -Situation – Health Minister- Sudhakar