ಬೆಂಗಳೂರು,ಜು,20,2020(www.justkannada.in): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಈ ನಡುವೆ ಇಂದು ಕೊರೋನಾ ಟಾಸ್ ಫೋರ್ಸ್ನ ಮಹತ್ವದ ಸಭೆ ನಡೆಯಲಿದೆ.
ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಲಾಕ್ಡೌನ್ ಮುಂದುವರಿಕೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು ಈ ಹಿನ್ನೆಲೆ ಜಾರಿಯಲ್ಲಿರುವ ಲಾಕ್ಡೌನ್ ಮುಂದುವರಿಸಬೇಕೆ ಬೇಡವೇ ಎಂಬುದು ಚರ್ಚಗೆ ಬರಲಿದೆ. ಲಾಕ್ ಡೌನ್ ಮುಗಿಯಲು ಇನ್ನು ಎರಡು ದಿನ ಬಾಕಿ ಇದೆ. ಹೀಗಾಗಿ ಅದನ್ನು ಮುಂದುವರಿಸಬೇಕಾ ಬೇಡವಾ ಎಂಬುದನ್ನು ಈ ಸಭೆಯಲ್ಲಿ ಬಗ್ಗೆ ಚರ್ಚಿಸಿ ಅದನ್ನು ಸಿಎಂಗೆ ತಿಳಿಸಲಿದ್ದಾರೆ. ನಂತರ ಸಿಎಂ ಯಡಿಯೂರಪ್ಪ ಲಾಕ್ಡೌನ್ ಬಗ್ಗೆ ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳಲಿದ್ದಾರೆ.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭಾಗವಹಿಸುವ ಸಾಧ್ಯತೆ ಇದೆ.
Keywords: Covid -Task Force- meeting -evening.