ಬೆಂಗಳೂರು, ಜನವರಿ 02, 2021 (www.justkannada.in): ನಾಳೆಯಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ವಿರುದ್ಧ ಲಸಿಕಾ ಅಭಿಯಾನ ಆರಂಭವಾಗಲಿದೆ.
ವ್ಯಾಕ್ಸಿನೇಷನ್‌ಗಾಗಿ ಕೋವಿಡ್ ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಬೇಕಿದೆ. ನಿನ್ನೆಯಿಂದ ನೋಂದಣಿ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಲು ಹೆಸರು ರಿಜಿಸ್ಟ್ರರ್ ಮಾಡಬೇಕಿದೆ.
15-18 ವರ್ಷ ವಯಸ್ಸಿನ ಮಕ್ಕಳು ಹಾಗೂ ಅವರ ಪೋಷಕರು Co-WIN ವೆಬ್ ಸೈಟ್ ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಅಥವಾ ಅನನ್ಯ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಖಾತೆಯನ್ನು ರಚಿಸುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಪೋರ್ಟಲ್‌ನಲ್ಲಿ ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು.