ಬೆಂಗಳೂರು,ಮೇ,1,2021(www.justkannada.in): 18 ರಿಂದ 44 ವಯಸ್ಸಿನವರಿಗೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಗೊಂದಲ ಉಂಟು ಮಾಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ದಿನೇಶ್ ಗುಂಡೂರಾವ್, 18 ವರ್ಷದಿಂದ 44 ವರ್ಷದವರಿಗೆ ವ್ಯಾಕ್ಸಿನ್ ಸಿಗುತ್ತೋ..? ಇಲ್ವೋ..? 18 ವರ್ಷದಿಂದ 44 ವರ್ಷದವರಿಗೆ ವ್ಯಾಕ್ಸಿನ್ ಇಲ್ಲ ಎಂದು ಸಚಿವ ಸುಧಾಕ್ ಹೇಳುತ್ತಾರೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಹೀಗಾಗಿ ಸಿಎಂ ಅಭಿಯಾನ ಸರಿಯೋ..? ಸಚಿವರ ಹೇಳಿಕೆ ಸರಿಯೋ..? ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಲಸಿಕೆ ದಾಸ್ತಾನು ಇಲ್ಲ ಎಂದು ಸಚಿವ ಸುಧಾಕರ್ ಹೇಳುತ್ತಾರೆ..ಮತ್ತೊಂದು ಕಡೆ ಲಸಿಕೆ ಬೇಕಾದಷ್ಟಿದೆ ಎಂದು ಸಿಎಂ ಹೇಳುತ್ತಾರೆ. ಹೀಗೆ ತಲೆಗೊಂದು ಹೇಳಿಕೆ, ತಲೆಗೊಂದು ಅಭಿಪ್ರಾಯ ಕೊಡುತ್ತಾ ಈ ಸರ್ಕಾರ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ. ಹಾಗಾದರೆ ಇಲ್ಲಿ ಸುಳ್ಳು ಹೇಳುತ್ತಿರುವುದು ಯಾರು..? ಮುಖ್ಯಮಂತ್ರಿಗಳೋ.? ಆರೋಗ್ಯ ಸಚಿವರೋ ? ಮೊದಲು ವ್ಯಾಕ್ಸಿನ್ ಬಗೆಗಿನ ಗೊಂದಲ ಸರಿಪಡಿಸಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.
Key words: covid- vaccine- CM -campaign -Minister’- statement –congress leader- Dinesh Gundurao