ಬೆಂಗಳೂರು,ಮಾರ್ಚ್,5,2021(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ 2ನೇ ಅಲೆ ಪ್ರಾರಂಭವಾಗಿದ್ದು, ದೇಶಾದ್ಯಂತ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಈ ಮದ್ಯೆ ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆಯಾಗಲಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರತ್ರ ಬರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಬೇಕು. ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಶುರುವಾಗಿದೆ. ದೇಶದಲ್ಲಿ ಎರಡು ಕೊರೋನಾ ಲಸಿಕೆಗೆ ಅನುಮತಿ ನೀಡಲಾಗಿದೆ. ಆದರೆ ಜನಸಾಮಾನ್ಯರಿಗೆ ಕೊರೋನಾ ಲಸಿಕೆ ದರ ನಿಗದಿ ಮಾಡಲಾಗಿದೆ. ವ್ಯಾಕ್ಸಿನ್ ಗೆ ಹಣ ಪಡೆಯದೆ ಉಚಿತವಾಗಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಕೋವಿಡ್ ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಇಂತಹ ಸಂಕಷ್ಟದ ಅವಧಿಯಲ್ಲಿ ವ್ಯಾಕ್ಸಿನ್ ನಿರೀಕ್ಷೆ ಹುಟ್ಟಿಸಿದೆ. ಆದರೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದ್ದು. ಇದುವರೆಗೆ ದೇಶದ ಜನಸಂಖ್ಯೆಯ ಒಟ್ಟು ಶೇ.0.5 ರಷ್ಟು ಮಂದಿಗೆ ಮಾತ್ರ ಲಿಸಿಕೆ ಸಿಕ್ಕಿದೆ. ಇಸ್ರೇಲ್ 36 ಶೇ, ಅಮೆರಿಕಾ 6 ಶೇ, ಇಂಗ್ಲೆಂಡ್ 4 ಶೇ ಜನಸಂಖ್ಯೆಗೆ ಕೋವಿಡ್ ಲಸಿಕೆಯನ್ನು ನೀಡಿದೆ. ಉಚಿತವಾಗಿ ಈ ಎಲ್ಲಾ ದೇಶಗಳು ಲಸಿಕೆಯನ್ನು ಜನರಿಗೆ ನೀಡಿವೆ.
ಆದರೆ ಭಾರತದಲ್ಲಿ ಜನಸಾಮಾನ್ಯರಿಗೆ 250 ರೂಪಾಯಿ ದರ ವಸೂಲಿ ಮಾಡಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಲಸಿಕೆ ಉಚಿತವಾಗಿ ದೊರಕುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ಜತೆಗೆ ಪಿಎಂ ಕೇರ್ ಫಂಡ್ ನ್ನು ಲಸಿಕೆಗೆ ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ENGLISH SUMMARY….
Let COVID vaccines be given free of cost to public – Siddaramaiah writes to PM Modi
Bengaluru, Mar. 05, 2021 (www.justkannada.in): Former Chief Minister Siddaramaiah has written a letter to Prime Minister Narendra Modi requesting him to provide COVID vaccination free of cost to the public.
“COVID vaccination has begun across the country. Two doses of the vaccine have been permitted for each person. Prices have been fixed for common people to get the vaccination. I request you to kindly provide the vaccination free of cost. The people of the country are facing a lot of problems due to the COVID pandemic and the vaccination has triggered hope among them. But the campaign is moving at a very slow pace and only 0.5% of the population has been reached. Whereas the percentage in Israel is 36%, America 6%, England 4%. All these countries are providing vaccination free of cost,” the letter read.
Keywords: Former CM Siddaramaiah/ letter to PM Modi/ COVID pandemic/ Vaccination/ free of cost
Key words: covid vaccine – distribute – public- free –Siddaramaiah- letter- PM Modi