ಬೆಂಗಳೂರು,ಫೆಬ್ರವರಿ,01,2021(www.justkannada.in) : ಕೋವಿಡ್ ಹಿನ್ನೆಲೆಯಲ್ಲಿ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಭಾರತದಲ್ಲಿ ಈಗಾಗಲೇ 2 ಲಸಿಕೆ ಅಭಿವೃದ್ದಿಪಡಿಸಿದೆ. ಇದಕ್ಕಾಗಿ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೋವಿಡ್ ಮಹಾಮಾರಿ ನಡುವೆ ಬಜೆಟ್ ತಯಾರಿ ನಡೆದಿತ್ತು. ಇಡೀ ಜಗತ್ತಿನಲ್ಲಿಯೇ ಭಾರತದಲ್ಲಿಂದು ಅತೀ ಕಡಿಮೆ ಪ್ರಮಾಣದ ಕೋವಿಡ್ ಪ್ರಮಾಣ ದಾಖಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ಕೆಲಸ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರು, ನಿರ್ಗತಿಕರು ಹಾಗೂ ಕೈಗಾರಿಕೆಗಳಿಗೆ ನೆರವು ನೀಡಿತ್ತು ಎಂದು ವಿವರಿಸಿದ್ದಾರೆ.
ದೇಶದಲ್ಲಿ ಹಲವರು ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. ಮೇ-2020ರಂದು ಆತ್ಮನಿರ್ಭರ ಯೋಜನೆಯನ್ನು ಘೋಷಿಸಿದ್ದೇವೆ. ಏತನ್ಮಧ್ಯೆ 5 ಮಿನಿ ಬಜೆಟ್ ಮಂಡಿಸಲಾಗಿತ್ತು. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸದಿದ್ದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಪಿಎಜಿವೈ ಮೂಲಕ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಜಾಗತಿಕ ಆರ್ಥಿಕತೆ ಈಗಾಗಲೇ ಕುಸಿಯತೊಡಗಿದೆ. ಎಂದೂ ಕಂಡರಿಯದ ಕೋವಿಡ್ ಕಾಲದಲ್ಲಿ ಬಜೆಟ್ ಮಂಡನೆಯಾಗುತ್ತಿದೆ. ಪ್ರಧಾನಿ ಮೋದಿ ಗರೀಬ್ ಕಲ್ಯಾಣ ಯೋಜನೆ ಘೋಷಿಸಿದ್ದರು. ಈ ದಶಕದ ಮೊಟ್ಟ ಮೊದಲ ಬಜೆಟ್ ಮಂಡನೆ ಶುರು ಎಂದು ಹೇಳಿದರು.
key words : Covid-Background-27.1 lakh crore-Package-Announcement-Finance-Minister-Nirmala Sitharaman