ಕಾರ್ ಶೆಡ್ ಅನ್ನೇ  “ ದೇಸಿ cow ಶೆಡ್”  ಅನ್ನಾಗಿಸಿದ ಮೈಸೂರಿನ ಕುಟುಂಬ, ಈಗ ಕರುಗಳಿಗೆ ತೊಟ್ಟಿಲು ಶಾಸ್ತ್ರ ಮಾಡಿದೆ.!

The family of Mysore, which converted the car shed into a "desi cow shed", has now done cradle shastra for calves. For the past three years, punganur, a native of Andhra Pradesh, has been rearing desi cows at K.R. Vanam, behind Sarada Vilas College in Mysuru. Madhusudhana's grandfather and his family are rearing three cows and two calves in the car shed of the house.

 

ಮೈಸೂರು, ಜ.೦೪,೨೦೨೫:  ಕಾರ್ ಶೆಡ್ ಅನ್ನೇ  cow ಶೆಡ್ ಆಗಿ ಪರಿವರ್ತಿಸಿರುವ ಕುಟುಂಬವೊಂದು ದೇಸಿಯ ಗೋವಿನ ಲಾಲನೆ, ಪಾಲನೆಯಲ್ಲಿ ನಿರತವಾಗಿದೆ. ಮಾತ್ರವದಲ್ಲದೆ ಇತ್ತೀಚೆಗೆ ಕರುಗಳ ತೊಟ್ಟಿಲು ಶಾಸ್ತ್ರವನ್ನು ನೆರೆವೇರಿಸಿದೆ ಈ ಕುಟುಂಬ.

ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಹಿಂಬಾಗದ ಕೆ ಆರ್ ವನಂ ಎಂಬಲ್ಲಿ ಕಳೆದ  3 ವರ್ಷಗಳಿಂದ ಪುಂಗನೂರು ಎಂಬ ಆಂದ್ರ ಪ್ರದೇಶ ಮೂಲದ ದೇಸಿ ಹಸುಗಳನ್ನು ಸಾಕಲಾಗುತ್ತಿದೆ. ಮಧುಸೂದನ ತಾತಾಚಾರ್ಯ ಮತ್ತು ಕುಟುಂಬದವರು ಮೂರು ಹಸು ಮತ್ತು ಎರಡು ಕರುಗಳನ್ನು ಮನೆಯ ಕಾರ್ ಶೆಡ್ನಲ್ಲಿ ಸಲಹುತ್ತಿದ್ದಾರೆ.

ಸಿರಿ, ನಿಧಿ, ಸಿಹಿ ಎಂಬ ಹಸುಗಳು ಮತ್ತು ಸಿರಿಯ ಮಗಳಾದ ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಕರುಗಳನ್ನು ಸಹ ಈ ಕುಟುಂಬ ಸಾಕುತ್ತಿದೆ.  ಇತ್ತೀಚೆಗಷ್ಟೇ ಈ ಎರಡೂ ಕರುಗಳಿಗೆ (ಭುವಿ  ಮತ್ತು ಸ್ವಾತಿ) ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಮಕ್ಕಳಂತೆ, ಮನೆಯ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯು ನಮ್ಮ ದೇಶದಲ್ಲಿದೆ. ಅದರಂತೆ ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತಾ, ಮಾತೃ ಸ್ವರೂಪವಾದ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಗೋ ಪೋಷಕ ಮಧುಸೂದನ್ ತಾತಾಚಾರ್ಯ.

ಬಂಧುಗಳು, ಕುಟುಂಬದವರು, ಹಿತೈಷಿಗಳು, ನೆರೆಹೊರೆಯವರು, ಗೋಭಕ್ತರು, ಸ್ನೇಹಿತರು- ಇವರೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳೊಂದಿಗೆ ಹರಿ ಬ್ರಹ್ಮ ಗೋ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮೂಲತಃ ತಲಕಾಡಿನ ಹೊಸಬೀದಿಯಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ 10 ವರ್ಷಗಳಿಂದ ಗೋಶಾಲೆ ನಡೆಸುತ್ತಿದ್ದಾರೆ.

ದೇಸಿ ತಳಿಗಳಾದ ಒಂಗೋಲ್, ತಾರ್ ಪಾರ್ಕರ್, ಗೀರ್, ಬರಗೂರು,ಸಾಹಿವಾಲ್ ತಳಿಗಳನ್ನು ಇಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟದ ಹಾಲನ್ನು ಕೊಡುವಂತಹ, ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ, ಸ್ನೇಹಮಯ ಜೀವಿಗಳಾದ, ಸಾಕಿದವರ ಮನೆಯಲ್ಲಿ ನೆಮ್ಮದಿಯನ್ನುಂಟುಮಾಡುವ, ಮಕ್ಕಳಂತೆ ಆಡುವ, ತಾಯಿಯಂತೆ ಕಾಯುವ, ವಿಶೇಷ ಲಕ್ಷಣಗಳಿಂದ ಕೂಡಿದ ಸುಂದರ ರೂಪವುಳ್ಳ ನಮ್ಮ ಭಾರತೀಯ ಗೋ ತಳಿಗಳು ಮನುಕುಲದ ನಿರ್ಲಕ್ಷ್ಯದ ಕಾರಣ ಇಂದು ಅಳಿವಿನ ಅಂಚಿಗೆ ಬಂದಿದೆ.

ಕೇವಲ ಹಾಲು ಉತ್ಪಾದನೆ ಮತ್ತು ಹಣ ಸಂಪಾದನೆಯನ್ನು ಗುರಿಯಾಗಿ ಇಟ್ಟುಕೊಳ್ಳದೆ ದೇಸಿ ಗೋವುಗಳನ್ನು ಸ್ವತ: ಬೆಳೆಸುವುದು ಅಥವಾ ಅವುಗಳನ್ನು ಬೆಳೆಸುವ ಗೋಶಾಲೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದು ಸಮಾಜವು ಒಗ್ಗಟ್ಟಿನಿಂದ ನಿಂದು ಮಾಡಬೇಕಾದ ಜವಾಬ್ದಾರಿಯುತ ಕೆಲಸವಾಗಿದೆ.

KEY WORDS: Mysore, car shed, “desi cow shed”, cradle shastra, calves.

SUMMARY:

The family of Mysore, which converted the car shed into a “desi cow shed”, has now done cradle shastra for calves.

For the past three years, punganur, a native of Andhra Pradesh, has been rearing desi cows at K.R. Vanam, behind Sarada Vilas College in Mysuru. Madhusudhana’s grandfather and his family are rearing three cows and two calves in the car shed of the house.