ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಎಲ್ಲಾ ವಿವಿಗಳು ಉದ್ಯೋಗಿಗಳನ್ನಷ್ಟೇ ಸೃಷ್ಟಿಸುತ್ತಿವೆ. ಆದರೆ, ದೇಶಿ ಜ್ಞಾನವಂತರನ್ನು ಸೃಷ್ಟಿಸುವ ಕೆಲಸ ಆಗಬೇಕು ಎಂದು
ಕೇಂದ್ರದ ಮಾನವ ಸಂಪನ್ಮೂಲ, ಬಿಲ್ಡಿಂಗ್ ಕೆಪಾಸಿಟಿ ಮಿಷನ್ ಸದಸ್ಯರಾದ ಡಾ.ಆರ್. ಬಾಲಸುಬ್ರಹ್ಮಣ್ಯಂ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂಬಂಧ ಕೋವಿಡ್ ನಂತರದ ಜಗತ್ತು ಉನ್ನತ ಶಿಕ್ಷಣದಲ್ಲಿ ಶಿಕ್ಷಕರು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕೋವಿಡ್ ಬಗ್ಗೆ ಭವಿಷ್ಯದಲ್ಲಿ ಸಾಕಷ್ಟು ಸಂಶೋಧನೆ ನಡೆಯಲಿದೆ. ಮನುಷ್ಯರಾಗಿ ಮನುಕುಲಕ್ಕೆ ನಾವೇನು ಇಲ್ಲ ಎಂಬುದನ್ನು ಕೋವಿಡ್ ತೊರಿಸಿದೆ. ವಿಜ್ಞಾನ ಇದೆ ನಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅಹಂ ಇತ್ತು. ಆದರೆ ಕಣ್ಣಿಗೆ ಕಾಣದ ವೈರಸ್ ಅದನ್ನು ಸುಳ್ಳು ಮಾಡಿದೆ. ನವ ಶಿಕ್ಷಣ ನೀತಿಯಿಂದ ನವ ಭಾರತವನ್ನು ಸೃಷ್ಟಿಸಬೇಕಿದೆ ಎಂದು ಹೇಳಿದರು.
ನವ ಭಾರತಕ್ಕೆಬೇಕಾದ ಕರ್ಮಯೋಗಿ ಗಳನ್ನು ಕಾಲೇಜುಗಳು ಸೃಷ್ಟಿಸಬೇಕಿದೆ. ಹಾಗಾಗಿ ಭೂತ ಕಾಲದ ಬಗ್ಗೆ ಚರ್ಚೆ ಮಾಡಬೇಕಾದ ಅವಶ್ಯಕತೆ ಇಲ್ಲ. ಭವಿಷ್ಯಕನಸುಗಳ ಬಗ್ಹೆ ಮಾತನಾಡಬೇಕಿದೆ. ಭಾರತರತ್ನ ಪ್ರಶಸ್ತಿ ಪಡೆದುಕೊಳ್ಲುವ ಮನಸ್ಸುಗಳು ಸೃಷ್ಟಿಸಬೇಕಿದೆ. ಅಮೆಜಾನ್, ಗೂಗಲ್ ನಮಗೆ ಪದವಿ ಪಡೆದವರು ಬೇಡ.. ಕೌಶಲ್ಯ ಇರುವವರು ಬೇಕಿದ್ದಾರೆ ಎಂದು ಘೋಷಿಸಿದೆ. ಹಾಗಾಗಿ ಕೌಶಲ್ಯದ ಮಹತ್ವ ಅರ್ಥ ಎಲ್ಲರೂ ಮಾಡಕೊಳ್ಳಬೇಕಿದೆ. ವಿದ್ಯಾರ್ಥಿಗಳಲ್ಲಿ ಬದಲಾವಣೆ ಆಗಿದೆ. ಶಿಕ್ಷಕರಲ್ಲಿ ಇದೆ ಬದಲಾವಣೆ ಆಗಬೇಕು. ನಮಗೆ ಶಿಕ್ಷಕರಲ್ಲ ಬೇಕಿರುವುದು ಗುರುಗಳು. ಈ ಎರಡು ಪದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದರು.
ಶಿಕ್ಷಣದಲ್ಲಿ ಕಲಿಕಾ ವಿಧಾನವಷ್ಟೇ ಅಲ್ಲ, ಎಲ್ಲವೂ ಬದಲಾಗಬೇಕು. ಹೊಸ ಬಿಲ್ಡಿಂಗ್ , ಪ್ರೊಜೆಕ್ಟರ್ ಬಂದರಷ್ಟೇ ಸಾಲದು. ಕಲಿಯುವ ಕಲಿಸುವ ಮನಸ್ಸುಗಳೆರಡು ಬದಲಾವಣೆಗೆ ತೆರೆದುಕೊಳ್ಳಬೇಕಿದೆ. ಕೋವಿಡ್ ಸಮಯದಲ್ಲಿ ಸರ್ವೇವೊಂದರ ಪ್ರಕಾರ ಭಾರತದಲ್ಲಿ 14ರಿಂದ 25 ವರ್ಷದ ಒಳಗಿನವರು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೋರ್ನ್ ಚಿತ್ರಗಳನ್ನು ವೀಕ್ಷಿಸಿದ್ದಾರೆ. ನೀಲಿ ಚಿತ್ರ ನೋಡುವುದು ತಪ್ಪಲ್ಲ. ಆದರೆ, ಮಕ್ಕಳು ಶಾಲೆ-ಕಾಲೇಜು ಇಲ್ಲದ ಸಮಯವನ್ನು ಹೇಗೆ ವಿನಿಯೋಗಿಸುತ್ತಿದ್ದಾರೆ ಎಂಬುದಷ್ಟೇ ಆತಂಕಕಾರಿ ವಿಚಾರ. ಎಲ್ಲವನ್ನೂ ಆನ್ಲೈನ್ ನಲ್ಲಿ ಕಲಿಯಲು ಆಗಲ್ಲ. ಶೇ.10ರಷ್ಟು ಶಿಕ್ಷಣ ಆನ್ಲೈನ್ ನಲ್ಲಿ ಸಿಕ್ಕರೆ ಶೇ.90ರಷ್ಟು ಕಾಲೇಜಿನಲ್ಲಿ ಶಿಕ್ಷಕರಿಂದ ದೊರೆಯುತ್ತದೆ ಎಂದರು.
ಮೈ ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.
key word: Create knowledgeable people, not employees says Dr. R. Balasubramaniam