ಮೈಸೂರು,ಡಿಸೆಂಬರ್,20,2022(www.justkannada.in): ನಕಲಿ ದಾಖಲೆ ಸೃಷ್ಠಿಸಿ ಅಕ್ರಮವಾಗಿ ಜಮೀನು ಖಾತೆ ಮಾಡಿಸಿದ ಆರೋಪದ ಮೇಲೆ ತಹಶೀಲ್ದಾರ್, ಗ್ರಾಮಲೆಕ್ಕಿಗ ಹಾಗೂ ರೆವಿನ್ಯೂ ಇನ್ಸ್ ಪೆಕ್ಟರ್ ಸೇರಿ ಐವರ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಅನಿವಾಸಿ ಭಾರತೀಯ ರವಿ ಎಂಬುವವರ ತಂದೆಗೆ ಸೇರಿದ್ದ 1.08 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರೋಪದ ಮೇಲೆ ಮೈಸೂರು ತಾಲ್ಲೂಕು ವರುಣಾ ಹೋಬಳಿಯ ದೇವೇಗೌಡನಹುಂಡಿ ಗ್ರಾಮದ ನಿವಾಸಿ ಮರೀಗೌಡ, ಶಿವರಾಂ ಹಾಗೂ ಇವರಿಗೆ ಸಹಕರಿಸಿದ ಗ್ರಾಮಲೆಕ್ಕಿಗ ಮಹೇಶ್, ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ತಹಶೀಲ್ದಾರ್ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ .
ಈ ಸಂಬಂಧ ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ಧ ರವಿ ಅವರು, ನಾನು ಅನಿವಾಸಿ ಭಾರತೀಯನಾಗಿದ್ದು ವೃತ್ತಿ ನಿಮಿತ್ತ ಸೌದಿ ಅರೇಬಿಯಾದಲ್ಲಿ, ನೆಲೆಸಿದ್ದೇನೆ. ಮೈಸೂರು ತಾಲ್ಲೂಕು ವರುಣ ಹೋಬಳಿ ಯಡಕೊಳ ದಾಖಲೆ ದೇವೆಗೌಡನಹುಂಡಿ ಗ್ರಾಮದಲ್ಲಿ, ನಮ್ಮ ಪೂರ್ವಜರ ಜಮೀನಿದ್ದು, ಅದು ಸರ್ವೆ ನಂಬರ್ 368/2 ಜಾಗದಲಿ.. 1.08 (ಒಂದು ಎಕರೆ ಎಂಟು ಗುಂಟೆ) ನಮ್ಮ ತಂದೆಯವರಿಗೆ ಸೇರಿದೆ. ಇದಕ್ಕೆ ಪೂರಕವಾಗಿ 1994 ರ ನನ್ನ ತಾತಾನವರಾದ ಚಿಕ್ಕಮಾದೇಗೌಡ ರವರ ಇಬ್ಬರೂ ಹೆಂಡತಿಯರ ಪೈಕಿ ಮಗನಾದ ನನ್ನ ತಂದೆ ದಿವಗಂತ ಮಹದೇವ ರವರಿಗೆ 1.08 ಗುಂಟೆ ಹಾಗೂ ಅವರ ಎರಡನೆ ಹೆಂಡತಿಯಾದ ಬೀರಮ್ಮ ರವರಿಗೆ 1.08 ಗುಂಟೆ ಸಮಪಾಲಾಗಿ ವಿಭಾಗ ಮಾಡಲಾಗಿತ್ತು. 2014 ರಲ್ಲಿ ನನ್ನ ತಾತಾನ ಎರಡನೇ ಹೆಂಡತಿಯ ಮಕ್ಕಳಾದ ಮರಿಗೌಡ ಮತ್ತು ಶಿವರಾಮ್ ರವರು ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಸಾಕ್ಷಿಯನ್ನು ಒದಗಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಈ ಹಂತದಲ್ಲಿ ಅಂದು ಕರ್ತವ್ಯನಿರತರಾದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಮಹೇಶ ಜೊತೆಗೆ ಆ ಅವಧಿಯಲ್ಲಿ ಕರ್ತವ್ಯದಲಿದ್ದ ಕಂದಾಯ ನೀರಿಕ್ಷಕರು ( ಆರ್ ಐ), ತಹಶೀಲ್ದಾರ್ ಈ ಮೂವರು ಜೊತೆಗೂಡಿ ಶಿವರಾಮ ಹಾಗೂ ಮರಿಗೌಡರಿಗೆ ಸಹಕರಿಸುವ ದುರುದ್ದೇಶದಿಂದ ಪರಿಪೂರ್ಣವಾಗಿ ಪರಿಶೀಲನೆ ನಡೆಸದೆ ನಕಲಿ ದಾಖಲೆ ಹಾಗೂ ಸುಳ್ಳು ಸಾಕ್ಷಿ ಸೃಷ್ಟಿಸಿರುವುದಕ್ಕೆ ಜವಾಬ್ದಾರರಾಗಿದ್ದಾರೆ. ಹಾಗಾಗಿ ಇವರುಗಳ ವಿರುದ್ಧ ನಕಲಿ ದಾಖಲೆ ಸೃಷ್ಟಿ, ಸುಳು ಸಾಕ್ಷಿ ಸೃಷ್ಟಿ, ವಂಚನೆ ಹಾಗೂ ಅಧಿಕಾರ ದುರ್ಬಳಕೆ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದರು.
ಜೊತೆಗೆ ನಮಗೆ ಸೇರಿದ 1.08 ಗುಂಟೆ ಜಮೀನು ಅವರ ಹೆಸರಿನಲ್ಲಿ ( ಬೀರಮ್ಮ) ಶಿವರಾಮ ಮತ್ತು ಮರಿಗೌಡ ರವರ ತಾಯಿಗೆ ಖಾತೆಯಾಗಿದ್ದು, ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ರವಿ ಮನವಿ ಮಾಡಿದ್ದರು. ದೂರನ್ನು ಆಧರಿಸಿ ಐವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
Key words: creating -fake document- Accusation – illegal- land – FIR -mysore