ಮೈಸೂರು,ಅಕ್ಟೋಬರ್,27,2022(www.justkannada.in): ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೂರು ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ . ಈ ನಡುವೆ ಕಾಂಗ್ರೆಸ್,ಜೆಡಿಎಸ್ ಗೆ ಸಾರಿಗೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಯಾರ ಅವಧಿಯಲ್ಲಿ ಸಮಿತಿ ರಚನೆ ಯಾಗಿದೆ ಎಂಬುದು ಮುಖ್ಯವಲ್ಲ. ಆದರೆ ಮೀಸಲಾತಿ ಹೆಚ್ಚಳ ಅನುಷ್ಟಾನಕ್ಕೆ ತಂದಿರುವುದು ಬಿಜೆಪಿ. ಜೆಡಿಎಸ್, ಕಾಂಗ್ರೆಸ್ ಗೆ ರಾಜಕೀಯ ಇಚ್ಚಾಶಕ್ತಿ ಕೊರತೆ ಇದೆ. ಹೀಗಾಗಿ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ನಮಗೆ ಇಚ್ಚಾಶಕ್ತಿ ಇದೆ . ಹೀಗಾಗಿ ಮೀಸಲಾತಿ ಹೆಚ್ಚಳ ಅನುಷ್ಟಾನ ತಂದಿದ್ದೇವೆ. ಬಿಎಸ್ ವೈ, ಸಿಎಂ ಬಸವರಾಜ ಬೊಮ್ಮಾಯಿ ಅವರ ಇಚ್ಚಾ ಶಕ್ತಿಯಿಂದ ಮೀಸಲಾತಿ ಹೆಚ್ಚಳ ಅನುಷ್ಟಾನ ಮಾಡಿದ್ದೇವೆ ಎಂದರು.
ಯಾವುದೇ ಸಮುದಾಯ ಸೇರಿಸಲು ನಮ್ಮ ಅಭ್ಯಂತರವಿಲ್ಲ ಆದರೆ ಜಾತಿಯ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಮೀಸಲಾತಿ ಅನುಷ್ಟಾನಕ್ಕಾಗಿ ಸಮಿತಿಯನ್ನ ರಚಿಸಬೇಕು. ಆ ಸಮಿತಿ ನೀಡುವ ವರದಿಯನ್ವಯ ಕ್ರಮ ಕೈಗೊಳ್ಳಬೇಕು. ಏಕಾಏಕಿ ಅನುಷ್ಟಾನ ಹೆಚ್ಚಳ ಆಗಲ್ಲ. ಮೀಸಲಾತಿ ಹೆಚ್ಚಳ ಸಂಬಂಧ ದಶಕದಿಂದ ಹೋರಾಟ ಮಾಡಲಾಗಿದೆ. ಹೋರಾಟದ ಬಳಿಕ ಮೀಸಲಾತಿ ಹೆಚ್ಚಳ ಅನುಷ್ಟಾನ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
Key words: Credit war -reservation –hike-Minister -Sriramulu