ಇಸ್ಲಾಮಾಬಾದ್, ಆ,17,2020(www.justkannada.in): ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣವಿದ್ದು, ಈ ಸಂದರ್ಭದಲ್ಲಿ ಭಾರತದೊಂದಿಗೆ ಕ್ರಿಕೆಟ್ ಸರಣಿ ಪಂದ್ಯ ಆಡುವುದು ಕಷ್ಟವೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಡಾಕ್ಯುಮೆಂಟರಿಯೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ಸನ್ನಿವೇಶದಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯ ಆಡುವುದು ಕಷ್ಟ. ಅದಕ್ಕೆ ಪೂರಕವಾದ ವಾತಾವರಣವಿಲ್ಲ, ಭಾರತದ ಇಂದಿನ ಸರಕಾರ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಕೊಟ್ಟಿಲ್ಲ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 2008ರ ನಂತರ ಟೆಸ್ಟ್ ಪಂದ್ಯ ನಡೆದಿಲ್ಲ. 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯಾದ ನಂತರ 2012ರ ಚಳಿಗಾಲದಲ್ಲಿ ಭಾರತ-ಪಾಕಿಸ್ತಾನ ಬಾಲ್ ಕ್ರಿಕೆಟ್ ನ್ನು ಆಡಿದೆ ಆಷ್ಟೆ. 1992ರ ವಿಶ್ವಕಪ್ ನ್ನು ಪಾಕಿಸ್ತಾನ ಗೆದ್ದ ಸಂದರ್ಭದಲ್ಲಿ ಇಮ್ರಾನ್ ಖಾನ್ ತಂಡದ ನಾಯಕರಾಗಿದ್ದರು. 1979 ಮತ್ತು 1987ರಲ್ಲಿ ಎರಡು ಸರಣಿ ಪಂದ್ಯಗಳನ್ನು ಭಾರತದ ವಿರುದ್ಧ ತಾವು ಆಡಿರುವುದಾಗಿ ಇಮ್ರಾನ್ ಖಾನ್ ನೆನಪಿಸಿಕೊಂಡರು.
key words: cricket-Imran khan-india- pakistan-macth-difficult