ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ಭಾರತ – ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯವು ನಾಳೆ (ಅಕ್ಟೋಬರ್ 2) ಗೌಹಾಟಿಯಲ್ಲಿ ನಡೆಯಲಿದೆ.
3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ಗಳಿಂದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ವಿಶ್ವಾಸದಲ್ಲಿದೆ.
ಭಾನುವಾರದ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ.
ಈ ಪಂದ್ಯವು ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡವು ಜಯ ಸಾಧಿಸಿದರೆ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ.
ಸಂಭಾವ್ಯ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
- ರೋಹಿತ್ ಶರ್ಮಾ
- ಕೆಎಲ್ ರಾಹುಲ್
- ವಿರಾಟ್ ಕೊಹ್ಲಿ
- ಸೂರ್ಯಕುಮಾರ್ ಯಾದವ್
- ರಿಷಭ್ ಪಂತ್
- ದಿನೇಶ್ ಕಾರ್ತಿಕ್
- ಅಕ್ಷರ್ ಪಟೇಲ್
- ರವಿಚಂದ್ರನ್ ಅಶ್ವಿನ್
- ಅರ್ಷದೀಪ್ ಸಿಂಗ್
- ಹರ್ಷಲ್ ಪಟೇಲ್
- ಭುವನೇಶ್ವರ್ ಕುಮಾರ್