ಬೆಂಗಳೂರು, ಡಿಸೆಂಬರ್ 17, 2023 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ಇಂದು ಮೊದಲ ಪಂದ್ಯವನ್ನು ಆಡಲಿದೆ.
ಮೊದಲ ಪಂದ್ಯ ಇಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್ ಕ್ರಿಕೆಟ್ ಫೈನಲ್ ನಂತರ ಟೀಂ ಇಂಡಿಯಾ ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ.
ಇನ್ನು ಕನ್ನಡಿಗ ಕೆ.ಎಲ್. ರಾಹುಲ್’ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ರಾಹುಲ್ ಅವರಿಗೂ ಇದು ಮಹತ್ವದ ಸರಣಿಯಾಗಿದೆ.
2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ತಂಡ ಕಟ್ಟಲು ಈಗಿನಿಂದಲೇ ತಯಾರಿ ಮಾಡಲು ಈ ಸರಣಿ ಮುಖ್ಯ ಎಂದು ಹೇಳಲಾಗಿದೆ.
ಈ ಸರಣಿಯಲ್ಲಿ ಭಾರತ ತಂಡ ಜಯಿಸಿದರೆ, ರಾಹುಲ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಗೆ ಪೂರ್ಣ ಪ್ರಮಾಣದ ನಾಯಕನಾಗುವ ಅವಕಾಶದ ಬಾಗಿಲು ತೆರೆಯಲಿದೆ.