ಮೈಸೂರು, ಮಾರ್ಚ್ 23, 2020 (www.justkannada.in): ಲಾಕ್ಡೌನ್ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ಓಡಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ.
ಜನರು ಲಾಕ್ಡೌನ್ ಆದೇಶವನ್ನ ಲಘುವಾಗಿ ಪರಿಗಣಿಸಿದ್ದಾರೆ. ಎಲ್ಲಂದರಲ್ಲಿ ಓಡಾಡುತ್ತಿದ್ದಾರೆ. ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬಿಟ್ಟು ಬೇರೆ ಅಂಗಡಿಗಳು ತೆರೆದಿದ್ದಾರೆ. ಇವೇಲ್ಲವು ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎಂದು ಸುದ್ದಿಗೊಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಜನ ಯಾಕೇ ಇದನ್ನ ಸಿರಿಯಸ್ ಆಗಿ ತಗೋಳ್ತಿಲ್ಲ ಅಂತ ನಮಗೆ ಗೊತ್ತಾಗುತ್ತಿಲ್ಲ. ಇಂದಿನಿಂದ ಪೊಲೀಸರು ಮತ್ತಷ್ಟು ಗಂಭೀರವಾಗುತ್ತಾರೆ. ಮೈಸೂರಿನಲ್ಲಿ ಎಲ್ಲ ಖಾಸಗಿ ವಾಹನ ನಿಷೇಧ ಮಾಡಲಾಗಿದೆ. ಓಲಾ ,ಉಬರ್, ಆಟೋ, ಎಲ್ಲವನ್ನೂ ನಿಷೇಧಿಸಲಾಗಿದೆ. ಹೊರಜಿಲ್ಲೆಯಿಂದ ಬರುವ ಎಲ್ಲ ವಾಹನ ತಪಾಸಣೆ ಮಾಡ್ತಿವಿ. ಅನಗತ್ಯ ಓಡಾಡ ಇದ್ದರೆ ಪ್ರಶ್ನೆ ಮಾಡ್ತಿವಿ. ಉದ್ದೇಶ ಇಲ್ಲದೆ ಒಡಾಡಿದ್ರೆ ಕೇಸ್ ಹಾಕೋದು ಗ್ಯಾರೆಂಟಿ. ಇನ್ನು 10 ದಿನಗಳ ಕಾಲ ಇವೇಲ್ಲವನ್ನು ಸಹಿಸಿಕೊಳ್ಳಬೇಕು ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.
ಜಸ್ಟ್ ಕನ್ನಡ ವರದಿ: ಕೇವಲ ಬಾಯಿ ಮಾತಿಗೆ ಲಾಕ್ ಡೌನ್ ಜಾರಿಯಾಗಿದೆ. ಆದರೆ ಈ ನಿಯಮ ಬಹುತೇಕ ಕಡೆ ಜಾರಿಯಾಗಿಲ್ಲ. ಎಂದಿನಂತೆ ಮೈಸೂರಿನಲ್ಲಿ ಜನ ಸಂಚರಿಸುತ್ತಿದ್ದಾರೆ ಎಂದು ಜಸ್ಟ್ ಕನ್ನಡದಲ್ಲಿ ವೀಡಿಯೋ ಸಹಿತ ವರದಿ ಪ್ರಕಟಿಸಲಾಗಿತ್ತು.