ಬೆಳಗಾವಿ,ಆ,12,2019(www.justkannada.in): ಕಳೆದ ಒಂದು ವಾರದಿಂದ ಉಂಟಾಗಿರುವ ಪ್ರವಾಹ ಭೀತಿ ನಲುಗಿಹೋಗಿರುವ ಬೆಳಗಾವಿಯ ಜನತೆಗೆ ಇದೀಗ ಮೊಸಳೆಯ ಭೀತಿ ಎದುರಾಗಿದೆ. ಹೌದು, ಕೃಷ್ಣಾನದಿ ಪ್ರವಾಹದಿಂದಾಗಿ ಅಲ್ಲಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು ಜನರು ಭಯಭೀತರಾಗಿದ್ದಾರೆ.
ಈ ನಡುವೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಅಜಿತ ನಗರದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಪ್ರವಾಹದಿಂದಾಗಿ ಮೊಸಳೆ ಮನೆ ಮೇಲೆ ಕುಳಿತಿದೆ. ಮನೆಯ ಸುತ್ತಲೂ ಕೃಷ್ಣಾ ನದಿ ನೀರು ಸುತ್ತುವರೆದಿದ್ದು ಮನೆ ಮೇಲೇರಿ ಕುಳಿತಿರುವ ಮೊಸಳೆ 10 ಅಡಿಯಷ್ಟು ಉದ್ದವಿದೆ.
ಪ್ರವಾಹ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜನರು ಮೇಲ್ಛಾವಣಿ ಮೇಲೆ ಆಶ್ರಯ ಪಡೆದಿದ್ದು, ಇದೀಗ ಮೊಸಳೆ, ಹಾವು, ಚೇಳಿನಂತಹ ವಿಷ ಜಂತುಗಳು ಕಾಣಿಸಿಕೊಳ್ಳುವುದರಿಂದ ಜನರಲ್ಲಿ ಭಯ ಆವರಿಸಿದೆ.ಅಲ್ಲಲ್ಲಿ ಮೊಸಳೆಗಳು ಕಾಣಿಸಿಕೊಂಡಿರುವ ಹಿನ್ನೆಲೆ ಪ್ರವಾಹ ಭೀತಿಯಿಂದ ನಲುಗಿಹೋದವರಿಗೆ ಇದೀಗ ಮೊಸಳೆ ಭೀತಿ ಪ್ರಾರಂಭವಾಗಿದೆ.
Key words: Crocodile -sitting –house-belagavi-People – terrified.