ಸರ್ಕಾರದಿಂದ ಯಾಕೆ ಕೊಡ್ತೀರಿ, ನಿಮ್ಮ ಜೇಬಿನಿಂದ  ಹಣ ನೀಡಿ – ಡಿಕೆಶಿ ವಿರುದ್ದ MLC  ಸಿಟಿ ರವಿ ಕಿಡಿ

ಬೆಂಗಳೂರು,ಮಾರ್ಚ್,12,2025 (www.justkannada.in) :  ಗ್ಯಾರಂಟಿ ಅನುಷ್ಟಾನ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ ಪಡೆಯುವ ಹಕ್ಕಿದೆ ಎಂದು ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ  ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಸಂಘ ಸಂಸ್ಥೆಗಳಿಗೆ ಅನುದಾನ ಕೊಡಲು ಹಣ ಇಲ್ಲಅಂತಾರೆ,  ಗುತ್ತಿಗೆದಾರರು, ಹಾಲು ಉತ್ಪಾದಕರ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅತಿಥಿ ಶಿಕ್ಷಕರಿಗೆ ಗೌರವ ಧನ ನೀಡಲು ಹಣವಿಲ್ಲ ಅಂತಾರೆ.  ಅಂಗನವಾಡಿ ಕಾರ್ಯಕರ್ತರಿಗೆ ಸಹಾಯಕಿಯರಿಗೆ ಹಣ ನೀಡಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಲು ಮಾತ್ರ ಹಣ ಇದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಮೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜನರ ತೆರಿಗೆ ಹಣದಲ್ಲಿ ಮೋಸು ಮಸ್ತಿ ಮಾಡಿಸುತ್ತಿದ್ದಾರೆ.  ನಿಮ್ಮ ಕಾರ್ಯಕರ್ತರಿಗೆ ನಿಮ್ಮ ಜೇಬಿನಿಂದ ಹಣ ಕೊಡಿ ಸರ್ಕಾರದ ಹಣ ಯಾಕೆ ಕೊಡ್ತೀರಿ.  ಜನರ ಹಣವನ್ನ ಕಾಂಗ್ರೆಸ್  ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಸಿಟಿ ರವಿ  ಕೆಂಡಕಾರಿದರು.

Key words: government, congress worker, MLC, CT Ravi