ಅವರ ಮಾತು ಸರೀನಾ? ತಪ್ಪಾ? ಆತ್ಮಸಾಕ್ಷಿ ಅನ್ನೋದು ಮುಖ್ಯ- ಡಿಸಿಎಂ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಡಿಸೆಂಬರ್,21,2024 (www.justkannada.in):  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ ಸಿ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ  ಕುರಿತು ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಮ ಡಿಕೆ ಶಿವಕುಮಾರ್, ಅವರ ಮಾತು ಸರಿನಾ ತಪ್ಪಾ? ಅವರು  ದೊಡ್ಡ ನ್ಯಾಷನಲ್ ಪಾರ್ಟಿ ಲೀಡರ್.  ನನಗೂ ಅವನ ಬಗ್ಗೆ ಸಿಂಪತಿ ಇದೆ.  ಕಾನೂನಿನಲ್ಲಿ ಬೇಲ್ ಸಿಕ್ಕೇ ಸಿಕ್ಕುತ್ತದೆ.  ಅವರುಂಟು ಪೊಳಿಸರುಂಟು.  ಕೋರ್ಟ್ ಉಂಟು.  ಹೆಣ್ಣಿನ ಬಗ್ಗೆ ಮಾತನಾಡಿದ್ದು ಸರಿನಾ ಇಲ್ವ?  ಅವರು ಅರ್ಥಮಾಡಿಕೊಳ್ಳಬೇಕು ಆತ್ಮಸಾಕ್ಷಿ ಅನ್ನೋದು ಮುಖ್ಯ ಎಂದರು.

ಈ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಪ್ರಕರಣ ಈಗ ಕೋರ್ಟ್ ನಲ್ಲಿದೆ ನಾವು ಯಾವುದೇ ಹೇಳಿಕೆ ಗಳನ್ನ ಕೊಡಲು ಆಗಲ್ಲ ಅದು ನ್ಯಾಯಾಂಗ ನಿಂದನೆಯಾಗುತ್ತೆ ಆ ಬಗ್ಗೆ ಚರ್ಚಿಸುವುದು ಸಮಂಜಸವಲ್ಲ ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ  ಎಂದರು.

Key words: Lakshmi hebbalkar, CT Ravi, DCM, DK shivakumar