ಕಲ್ಬುರ್ಗಿ,ಡಿಸೆಂಬರ್,21,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಖರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣ ಸಂಬಂಧ ಎಂಎಲ್ ಸಿ ಸಿಟಿ ರವಿ ಅವರನ್ನ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚನೆ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಇದು ಜಾಮೀನು ಕೊಡಬಹುದಾದಂತ ಪ್ರಕರಣ ಸರ್ಕಾರಕ್ಕೆ ಇದೇನು ಮುಖಭಂಗ ಅಲ್ಲ ಎಂದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕರಣದಲ್ಲಿ ಬೇಲ್ ಆಗಿದೆ ಅಷ್ಟೆ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದನ್ನ ತಿರಸ್ಕಾರ ಮಾಡಿದ್ದಾರೆ ಇವರಿಗೆ ಎಷ್ಟು ದುರಹಂಕಾರ ಇರಬೇಕು. ಅದರಲ್ಲೇನು ಸತ್ಯಕ್ಕೆ ಜಯ ಅನ್ನೋದು . ನಾಚಿಕೆ ಆಗಲ್ವಾ? ಈ ಘಟನೆಯಿಂದ ಒಗ್ಗಾಟ್ಟಾಗಿದ್ದಾರೆ ಅಂದ್ರೆ ದುಶ್ಯಾಸನಗಳು ಅಲ್ವಾ ಎಂದು ಕಿಡಿಕಾರಿದರು.
ಪೊಲೀಸರು ಕಾನೂನು ಪ್ರಕಾರ ಮಾಡಿದ್ದಾರೆ ಸಿಟಿ ರವಿ ಆರೋಪಿ. ಅವರನ್ನ ಪೊಲೀಸರ ಅರೆಸ್ಟ್ ಮಾಡಿದ್ರೆ ಉಳಿದವರಿಗೇನು ಕೆಲಸ. ಸುಮ್ಮನೆ ಬಿಟ್ಟರೇ ವಿಐಪಿ ಟ್ರೀಟ್ ಮೆಂಟ್ ಎಂದು ಹೇಳುತ್ತಾರಿ ಕಾನೂನ ಪ್ರಕಾರ ಕೈಗೊಂಡರೇ ಹೀಗೆ ಮಾತಾನಾಡುತ್ತೀರಿ ಎಂದರು.
Key words: CT Ravi, release, Minister, Priyank Kharge