ಮೈಸೂರು,ಜೂ,2,2020(www.justkannada.in): ಕರೋನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಿದ್ದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಟ್ರಿಣ್ ಟ್ರಿಣ್ ಸೇವೆ ಇಂದಿನಿಂದ ಪ್ರಾರಂಭವಾಗಿದೆ.
ಇದೀಗ ನಗರದಲ್ಲಿ ಮತ್ತೆ ಟ್ರಿಣ್ ಟ್ರಿಣ್ ಬೈಸಿಕಲ್ ರಿಂಗಣಿಸಲಿದ್ದು, ಮೈಸೂರಿನ ಕೆಲವು ಡಾಕಿಂಗ್ ಕೇಂದ್ರಗಳಲ್ಲಿ ಇಂದಿನಿಂದ ಸೇವೆ ಲಭ್ಯವಾಗಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದೆರಡು ತಿಂಗಳಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಸ್ಥಗಿತವಾಗಿತ್ತು. ಇದೀಘ ಲಾಕ್ ಡೌನ್ ಸಡಿಲಿಕೆಯಾಗಿರುವುದರಿಂದ ಟ್ರಿಣ್ ಟ್ರಿಣ್ ಸೇವೆ ಪುನಾರಂಭಗೊಂಡಿದೆ.
ಜೂನ್ 4ಕ್ಕೆ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಮೂರು ವರ್ಷ ಪೂರ್ಣಗೊಳಿಸಲಿದೆ. ಟ್ರಿಣ್ ಟ್ರಿಣ್ ಸೇವೆಗೆ ಇದುವರೆಗೆ 14 ಸಾವಿರ ಮಂದಿ ನೋಂದಣಿ ಮಾಡಿಸಿದ್ದಾರೆ. ಪ್ರತಿದಿನ ಸರಾಸರಿ 1,200 ರಿಂದ 1,400 ಮಂದಿಯಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆಯಾಗುತ್ತಿತ್ತು.
Key words: cultural city – Mysore- trin trin- Bicycle -Service -available