ಮೈಸೂರು,ಜೂನ್,2,2022(www.justkannada.in): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಪ್ರತಿಭಾ ಪ್ರದರ್ಶನ ಕಾರ್ಯಗಳು,’ಮಹಾತರಂಗ’ ಎಂಬ ಶಿರೋನಾಮೆ ಅಡಿಯಲ್ಲಿ ನಡೆಯಲಿದ್ದು, ಅದರ ಅಂಕುರಾರ್ಪಣೆ ಕಾಲೇಜಿನ ಆವರಣದಲ್ಲಿ ನಡೆಯಿತು.
ಶಿರೋನಾಮೆ ಅಂಕುರಾರ್ಪಣೆ ನೆರವೇರಿಸಿ ಮಾತನಾಡಿದ ರಂಗಕರ್ಮಿ, ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಅವರು, ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನಕ್ಕೆ ಇದು ಸೂಕ್ತ ವೇದಿಕೆಯಗಲಿ ಎಂದು ಆಶಿಸಿದರು.
ಹೆಣ್ಣುಮಕ್ಕಳು ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡಬಾರದು. ಎಲ್ಲವನ್ನು ಧೈರ್ಯದಿಂದ ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಆತ್ಮವಿಶ್ವಾಸ ಬೆಳೆಸಿಕೊಂಡು ಸಾಹಸಮಯವಾಗಿ ಬದುಕಿರಿ ಎಂದು ಹುರಿದುಂಬಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ರವಿ ಅವರು ಮಾತನಾಡಿ, ಮಹಾತರಂಗ, ಶಿರೋನಾಮೆ ಅಡಿಯಲ್ಲಿ ಮುಂದಿನ ಮೂರು ದಿನಗಳಲ್ಲಿ ನಡೆಯುವ ಕಾರ್ಯಗಳು ಯಶಸ್ವಿಯಾಗಲಿ ಹಾಗೂ ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ , ಮಹಾರಾಣಿ ಕಾಲೇಜಿನ ಇತಿಹಾಸದ ಕುರಿತು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು ಲಕ್ಷ್ಮೀಪುರ ಅವರು ರಚಿಸಿರುವ ಧ್ಯೇಯಗೀತೆಯನ್ನು ಬಿಡುಗಡೆ ಮಾಡಲಾಯಿತು.
ರೇಡಿಯೋ ಜಾಕಿ ಅವಿನಾಶ್ ಮಾತನಾಡಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ಪರಶುರಾಮ ಮೂರ್ತಿ, ಖಜಾಂಚಿ ಡಾ. ಎಂ.ಪಿ.ರಾಘವೇಂದ್ರ, ಅಧ್ಯಾಪಕರು ಮತ್ತು ಕಛೇರಿ ಸಿಬ್ಬಂದಿ ಇದ್ದರು.
Key words: Cultural -Programs – Mysore- Maharani -Women’s -Science -College