ಬೆಂಗಳೂರು,ಜುಲೈ,5,2021(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ದಿಢೀರ್ ಭೇಟಿಯಾಗಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಡ್ಯ ಜಿಲ್ಲೆ ಜೆಡಿಎಸ್ ಶಾಸಕರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಹೆಚ್.ಡಿ ಕುಮಾರಸ್ವಾಮಿ ಕೆಲಕಾಲ ಚರ್ಚೆ ನಡೆಸಿದರು.
ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ಕೊಡದಂತೆ ಮನವಿ ಮಾಡಿದ್ದೇವೆ. ಖಾಸಗಿಯವರಿಗೆ ಕೊಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿ.ಪಂ ಮತ್ತು ತಾ.ಪಂ ಮೀಸಲು ಬಗ್ಗೆ ಸಚಿವರಾಗಿ ಸಿಪ ಯೋಗೇಶ್ವರ್ ಬಾಲಿಶ ಹೇಳಿಕೆ ನೀಡಿದ್ದು ಸರಿಯಲ್ಲ. ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ. ರಾಜ್ಯ ಸರ್ಕಾರ ಅಲ್ಲ ಎಂದು ಕಿಡಿಕಾರಿದರು.
ENGLISH SUMMARY…
CM BSY and former CM HDK’s sudden visit triggers curiosity in political circle
Bengaluru, July 5, 2021 (www.justkannada.in): Visit of former Chief Minister H.D. Kumaraswamy with the Chief Minister of the State, B.S. Yedyurappa has triggered curiosity in the state political circles.
The former CM met B.S. Yedyurappa along with the Mandya District JDS MLAs at the latter’s residential office ‘Krishna’ and discussed for some time.
Speaking to the media persons later the former CM explained that they have appealed to the Chief Minister not to privatize MySugar Factory in Mandya. “The Chief Minister has also assured not to do so. I appreciate him for honouring our request,” he said.
On the occasion, he said, “the statement given by Minister C.P. Yogeshwar regarding ZP and TP reservations appears childish. Reservations are made by the Election Commissioner, not the State Government.”
Keywords: Former CM H.D. Kumaraswamy/ Chief Minister B.S. Yedyurappa/ visit/ discussion/ CMs residential office/ Krishna/ MySugar factory/ Mandya
Key words: curious -Former CM HD kumaraswamy- CM BS yeddyurappa