ಬೆಂಗಳೂರು,ಮೇ,2,2021(www.justkannada.in): ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರ ಬೀಳುತ್ತಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಸೋಲು- ಗೆಲುವಿನ ಸ್ಪಷ್ಟ ಚಿತ್ರಣ ಸಿಗಲಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ಹೋರಾಟವಿದ್ದು ರಾಜ್ಯದಲ್ಲಿ ಟಿಎಂ.ಸಿ – 140, ಬಿಜೆಪಿ – 120 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ನಂದಿ ಗ್ರಾಮ – ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆಯಾಗಿದೆ.
ತಮಿಳುನಾಡು – ಅಧಿಕಾರದಲ್ಲಿ ಇದ್ದ AIDMK ಹಿನ್ನಡೆ ಅನುಭವಿಸಿದೆ. ಅಧಿಕಾರದ ಕಡೆ DMK ಮುಖಮಾಡಿದ್ದು , ಸ್ಟಾಲಿನ್ ನೇತೃತ್ವದ DMK ಗೆ ಭರ್ಜರಿ ಗೆಲವು ಸಾಧಿಸುವತ್ತ ಮುನ್ನುಗ್ಗಿದೆ.
ಕೇರಳ – ಮತ್ತೆ ಅಧಿಕಾರಕ್ಕೆ ಬಂದ ಪಿಣರಾಯ್ ವಿಜಯನ್ ನೇತೃತ್ವದ ಸರಕಾರ. ಅಸ್ಸಾಂ ಮತ್ತು ಪುದುಚೇರಿ – NDA ಗೆ ಗೆಲವು. ಅಧಿಕಾರಕ್ಕೆ ಬಿಜೆಪಿ ಮಿತ್ರ ಪಕ್ಷಗಳು.
Key words: Current -Trend – Five-State- Elections-counting