ಬೆಂಗಳೂರು, ಸೆಪ್ಟೆಂಬರ್,3, 2022 (www.justkannada.in): ಯೋಗ ಶಿಕ್ಷಣ ಒದಗಿಸುತ್ತಿರುವ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಯೋಗಿಕ್ ಸೈನ್ಸ್ ಎಂಬ ಹೆಸರಿನ ಪ್ರತಿಷ್ಠಿತ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ (ಬಿಯು) ಜ್ಞಾನಭಾರತಿ ಆವರಣದಲ್ಲಿ ಆ ಸಂಸ್ಥೆಯ ಕಟ್ಟಡವನ್ನು ನಿರ್ಮಿಸುವ ಸಲುವಾಗಿ, ರೆಡ್ ಸ್ಯಾಂರ್ಸ್ (ಕೆಂಪು ಚಂದನ) ಒಳಗೊಂಡಂತೆ 40 ಮರಗಳನ್ನು ಕತ್ತರಿಸಿ ಹಾಕಿದೆ.
ಈ ಕೇಂದ್ರ ಜ್ಞಾನಭಾರತ ಆವರಣದ ಒಳಗೆ ೧೫-ಎಕರೆ ಸ್ಥಳದಲ್ಲಿ ನೆಲೆಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಆವರಣದಲ್ಲಿರುವ ಜೈವಿಕ-ಉದ್ಯಾನವನದ ಬಳಿ ಯಾರೋ ಮರಗಳನ್ನು ಕಡಿಯುತ್ತಿರುವ ಸುದ್ದಿ ತಿಳಿದು, ಎಲ್ಲೋ ಅದು ಮರಗಳ್ಳರಿರಬೇಕೆಂದು ಅಲ್ಲಿಗೆ ಓಡಿ ಹೋದರಂತೆ. ನಂತರ ಅದು ಯೋಗಾ ಕೇಂದ್ರದ ಕಡೆಯ ಜನರು ಎಂದು ಗೊತ್ತಾಗಿ, ವಿಶ್ವವಿದ್ಯಾಲಯದ ಸಿಬ್ಬಂದಿಗಳು ಪ್ರತಿಭಟಿಸಿ ಅವರನ್ನು ತಡೆದಿದ್ದಾರೆ. “ಅಲ್ಲಿ ಏನಾಗುತ್ತಿದೆ ಎಂದು ನಾವು ಗ್ರಹಿಸುವಷ್ಟರೊಳಗೆ ಕೆಂಪು ಚಂದನ ಹಾಗೂ ಔಷಧೀಯ ಗುಣಗಳುಳ್ಳ ಕೆಲವು ಮರಗಳು ಒಳಗೊಂಡಂತೆ ೪೦ ಮರಗಳನ್ನು ಕಡಿದು ಹಾಕಿದ್ದರು,” ಎಂದು ಬಿಯು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ವಾಂಶರ ಸಂಘದ ಉಪಾಧ್ಯಕ್ಷ ಲೋಕೆಶ್ ರಾಮ್ ಅವರು ತಿಳಿಸಿದರು.
ಜೈವಿಕ-ಉದ್ಯಾನವನದ ಪ್ರಾಧಿಕಾರಗಳ ಪ್ರಕಾರ ಈ ಘಟನೆಯಲ್ಲಿ ಅಲ್ಲಿರುವ ನೂರಾರು ಔಷಧೀಯ ಗುಣಗಳುಳ್ಳ ಸಸಿಗಳು ಹಾನಿಯಾಗಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಈ ಕುರಿತು ಯಾವುದೇ ಮುಂಚಿತ ಮಾಹಿತ ಇರಲಿಲ್ಲವಂತೆ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಜಯಕರ ಎಸ್.ಎಂ. ಅವರು ಈ ಕುರಿತು ಮಾತನಾಡಿ, “ನಮ್ಮಿಂದ ಈ ಸಂಬಂಧ ಯಾರೂ ಅನುಮತಿಯನ್ನು ಪಡೆದಿಲ್ಲ ಅಥವಾ ಮುಂಚಿತವಾಗಿ ಮಾಹಿತಿಯೂ ನೀಡಿಲ್ಲ,” ಎಂದರು. ವಾಸ್ತವದಲ್ಲಿ ಅವರೂ ಸಹ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದರು.
ಈ ನಡುವೆ, ಬೆಂಗಳೂರು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಯೋಗ ಕೇಂದ್ರಕ್ಕೆ ನೀಡಿರುವ ಸ್ಥಳವನ್ನು ಹಿಂದಕ್ಕೆ ಪಡೆಯುವಂತೆ ಹಾಗೂ ಭವಿಷ್ಯದಲ್ಲಿ ಯಾವುದೇ ಸಂಸ್ಥೆಗಳಿಗೆ ಇಲ್ಲಿ ಸ್ಥಳಾವಕಾಶ ನೀಡದಿರುವಂತೆ ಉಪಕುಲಪತಿಗಳನ್ನು ಒತ್ತಾಯಿಸಿದೆ.
ಜೊತೆಗೆ ಸಮಿತಿಯು, ತುರ್ತು ಸಿಂಡಿಕೇಟ್ ಸಭೆಯೊಂದನ್ನು ಕರೆದು ಈ ಘಟನೆಗೆ ಸಂಬಂಧಿಸಿದಂತೆ ಒಂದು ವಿಚಾರಣೆ ನಡೆಸುವಂತೆ ಹಾಗೂ ಪೋಲಿಸ್ ದೂರು ದಾಖಲಿಸಯುವಂತೆಯೂ ಸಹ ಉಪಕುಲಪತಿಗಳನ್ನು ಒತ್ತಾಯಿಸಿದೆ. “ಲಕ್ಷಾಂತರ ರೂಪಾಯಿಗಳ ಮೌಲ್ಯವುಳ್ಳ ಅನೇಕ ಮರಗಳನ್ನು ಕತ್ತರಿಸಿ, ಔಷಧೀಯ ಗುಣಗುಳ್ಳುಳ್ಳ ಸಸಿಗಳು ಹಾನಿಯಾಗಲು ಕಾರಣರಾದಂತವರ ವಿರುದ್ಧ ಪೋಲಿಸ್ ದೂರು ನೀಡಬೇಕು ಎಂದು ನಾವು ಮಾನ್ಯ ಉಪಕುಲಪತಿಗಳನ್ನು ಕೋರಿದ್ದೇವೆ,” ಎಂದು ತಿಳಿಸಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Cutting – 40 trees – Bangalore University- campus