ಮೈಸೂರು, ಏಪ್ರಿಲ್ ,12,2021(www.justkannada.in): ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಮೈಸೂರು ಆವೃತ್ತಿ ವತಿಯಿಂದ, ಕೋವಿಡ್ ನ ಎರಡನೇ ಅಲೆಯಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಇಂದು ಮೈಸೂರಿನಲ್ಲಿ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು.
ಕೆ.ಆರ್. ಪೊಲೀಸ್ ಠಾಣೆಯ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರು ಈ ಸೈಕಲ್ ಜಾಥಾವನ್ನು ಉದ್ಘಾಟಿಸಿದರು. ಕೋವಿಡ್ ಸರ್ವವ್ಯಾಪಿಯ ಎರಡನೇ ಅಲೆ ವಯಸ್ಕರು ಸೇರಿದಂತೆ ಮಕ್ಕಳಿಗೂ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆಯನ್ನು ಹಾಗೂ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು.
ಬೆಳಿಗ್ಗೆ 6.30ಕ್ಕೆ ಆಂದೋಲನ ವೃತ್ತದ ಬಳಿ ಆರಂಭವಾದ ಈ 14 ಕಿ.ಮೀ. ಉದ್ದದ ಸೈಕಲ್ ಜಾಥಾ ಮಾನಂದವಾಡಿ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಸಾವಯವ ಫಾರಂ ಬಳಿ ಅಂತ್ಯಗೊಂಡಿತು.
Keywords: Cycle Jatha- COVID-19 -Pandemic awareness- pandemic affect -children