ಮೈಸೂರು, ಫೆಬ್ರವರಿ 08, 2020 (www.justkannada.in): ಫೆ.28, 29 ಹಾಗೂ ಮಾರ್ಚ್ 1ರಂದು ಮೂರು ದಿನ ಆಯೋಜಿಸಿರುವ ಅಂತರ್ ಕಾಲೇಜು ಸಾಂಸ್ಕೃತಿಕ ಮೇಳ ‘ಐಶ್ ಆವಾಜ್ 2020’ ಅಂಗವಾಗಿ ಇಂದು ನಗರದಲ್ಲಿ ಸೈಕಲ್ ಜಾಥಾ ನಡೆಯಿತು.
ನಗರದ ಜಾಥಾ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾ ಗಾಂಧಿ ಸ್ಕೇರ್, ಸಯ್ಯಾಜಿ ರಾವ್ ರಸ್ತೆ, ದೇವರಾಜ ಅರಸು ರಸ್ತೆ, ಡಿಸಿ ಕಚೇರಿ, ಕುಕ್ಕರಹಳ್ಳಿ ರಸ್ತೆ ಮೂಲಕ ಐಸ್ ಸಂಸ್ಥೆಯ ಪಂಚವಟಿ ಕ್ಯಾಂಪಸ್ ನಲ್ಲಿ ಸಮಾಪ್ತಿಯಾಯಿತು. 140ಕ್ಕೂ ವಿದ್ಯಾರ್ಥಿಗಳು ಟ್ರಿನ್ ಟ್ರಿನ್ ಸೈಕಲ್ ನಲ್ಲಿ ಪಾಲ್ಗೊಂಡಿದ್ದರು.
ಚಾಲನೆ ನೀಡಿದ ಮುಖ್ಯ ಪೇದೆ: ಫಿಟ್ ಇಂಡಿಯಾ ಮೂವ್ ಮೆಂಟ್ ಘೋಷಣೆಯೊಂದಿಗೆ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು. ದೇವರಾಜ ಪೊಲೀಸ್ ಠಾಣೆ ಮುಖ್ಯ ಪೇದೆ ರಮೇಶ್ ಅವರು ಜಾಥಾ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಪ್ರತಿ ಬಾರಿ ಜಾಥಾ ಮತ್ತಿತರ ಕಾರ್ಯಕ್ರಮ ಆಯೋಜಿಸಿದ ವೇಳೆ ಸೂಕ್ತ ರಕ್ಷಣೆ, ಭದ್ರತೆಗೆ ದುಡಿಯುವ ಪೊಲೀಸ್ ಸಿಬ್ಬಂದಿ ಮೂಲಕ ಜಾಥಾಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಐಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಹಾಗೂ ಜಿಮ್ಕಾನಾದ ಉಪಾಧ್ಯಕ್ಷರಾದ ಡಾ.ಕೆ.ಯಶೋಧಾ ಇತರೆ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.