ಬೆಂಗಳೂರು,ಜನವರಿ,11,2025 (www.justkannada.in): ಕರ್ನಾಟಕಕ್ಕೆ ಕೇವಲ 6 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ ರೂ. ಹಣ ತಮಿಳುನಾಡಿಗೆ 7 ಸಾವಿರ ಕೋಟಿ ರೂ. ಚಿಕ್ಕ ರಾಜ್ಯ ಆಂಧ್ರಗೆ 7 ಸಾವಿರ ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ. ಆದರೆ ಕರ್ನಾಟಕಕ್ಕೆ ಕೇವಲ 6 ಸಾವಿರ ಕೋಟಿ ರೂ. ಕೊಟ್ಟು ಅನ್ಯಾಯ ಮಾಡಿದೆ. ಕೇಂದ್ರದ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು ಎಂದರು.
ಮುಂದಿನ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಕೆ.ಎನ್ ರಾಜಣ್ಣ ಏನು ಮಾತನಾಡಿದ್ದಾರೂ ಗೊತ್ತಿಲ್ಲ ರಾಜಣ್ಣ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಿ. ರಾಜಣ್ಣ ಏನು ಹೇಳಬೇಕೋ ಸಿಎಂ ಮುಂದೆ ಹೇಳಲಿ ಹೈಕಮಾಂಡ್ ಮುಂದೆ ಹೇಳಲಿ ಎಂದು ಟಾಂಗ್ ಕೊಟ್ಟರು.
Key words: Former MP, D.K. Suresh , central government, injustice, taxes