ಬೆಂಗಳೂರು,ಫೆಬ್ರವರಿ,22,2023(www.justkannada.in): ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು ಇಬ್ಬರನ್ನೂ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಆದರೆ ಈಗ ಇದರೆಲ್ಲದರ ನಡುವೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ಆಡಿಯೋ ಹೊರಬಂದಿದ್ದು ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಮಾತನಾಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, ರೋಹಿಣಿ ಸಿಂದೂರಿ ಅವರ ವಿರುದ್ಧ ದೂರು ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಆರ್ ಟಿಐ ಕಾರ್ಯಕರ್ತ ಗಂಗರಾಜು, ನನ್ನ ವಿರುದ್ದ ಡಿ.ರೂಪಾ ಬೇಹುಗಾರಿಕೆ ಮಾಡುತ್ತಿದ್ದಾರೆ. ನನ್ನ ಜೊತೆ 25 ನಿಮಿಷ ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ದ ಹೋರಾಟಕ್ಕೆ ಬಳಸಿಕೊಂಡರು. ನನ್ನನ್ನ ಬಳಸಿಕೊಳ್ಳಲು ಡಿ. ರೂಪ ಪ್ರಯತ್ನ ಮಾಡಿದರು. ಸಾಮಾಜಿಕ ಹೋರಾಟಗಾರರನ್ನ ಬಳಸಿಕೊಳ್ಳಬೇಢಿ ಅಕ್ರಮದ ವಿರುದ್ಧ ಹೋರಾಟ ಮಾಡಬೇಕು. ಒಬ್ಬರ ವಿರದ್ದ ರೂಪಾ ಹೋರಾಡೋದು ಸರಿಯಲ್ಲ. ವಿಚಾರಣೆಗೆ ಕರೆದರೇ ಮಾಹಿತಿ ನೀಡುತ್ತೇನೆ ಸರ್ಕಾರಕ್ಕೆ ಎಲ್ಲಾ ದಾಖಲೆ ಕೊಡುತ್ತೇನೆ ರೂಪಾ ಮಾತಿನಿಂದ ನನಗೆ ನೋವಾಗಿದೆ ಎಂದಿದ್ದಾರೆ.
ನನಗೆ ಫೋನ್ ಮಾಡಿದಾಗ ಭೂವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದರು ಸಿಬಿಐ ಅಧಿಕಾರಿಗಳಂತೆ ಪ್ರಶ್ನಿಸಿದರು. ರೂಪಾ ಮೌದ್ಕಿಲ್ ನನ್ನ ಮೊಬೈಲ್ ನಿಂದ ಫೋಟೊ ತೆಗೆದುಕೊಂಡಿದ್ದಾರೆ ವಾಟ್ಸಪ್ ಚಾಟ್ ಸಾರಾ ಮಹೇಶ್ ಗೆ ಕಳಿಸಿದರು ಸ್ಕ್ರೀನ್ ಶಾಟ್ ವೈರಲ್ ಮಾಡೋದು ಸರಿನಾ..? ಫೋನ್ ಮಾಡಿದ ವೇಳೆ ಡಿ ರೂಪಾ ನನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರೋಹಿಣಿ ಅಕ್ರಮದ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇದೆ. ರೋಹಿಣಿ ಅಕ್ರಮದ ಬಗ್ಗೆ ಮಾಧ್ಯಮಗಳ ಬಳಿ ಹೇಳಿ ಅಂದ್ರು. ನನಗೆ ಫೋಟೋಗಳನ್ನ ಕಳಿಸಿ ಮಾಧ್ಯಮಗಳ ಮುಂದೆ ಇಡಿ ಎಂದರು. ಆದರೆ ನಾನು ನಿರಾಕರಿಸಿದ್ದಕ್ಕೆ ನನ್ನನ್ನ ರೂಪಾ ನಿಂದಿಸಿದ್ದಾರೆ. ಅನ್ಯಾಯ ಮಾಡಿದವರ ವಿರುದ್ದ ನಾನು ಹೋರಾಟ ಮಾಡುತ್ತೇನೆ . ಈಕೆ ಹೇಳಿದ್ದಾರೆಂದು ಬೇರೆಯವರ ತೇಜೋವಧೆ ಮಾಡಲಾಗಲ್ಲ ಎಂದು ಸಾಮಾಜಿಕ ಕಾರ್ಯಕರ್ತರ ಗಂಗರಾಜು ತಿಳಿಸಿದ್ದಾರೆ.
ನನ್ನ ಕುಟುಂಬಕ್ಕೆ ಏನಾದ್ರೂ ಆದ್ರೆ ರೂಪಾ ಕಾರಣ. ಅಧಿಕಾರ ಬಳಸಿ ರೂಪಾ ಏನಾದರೂ ಮಾಡಬಹುದು ಡಿ.ರೂಪಾ ಅವರು ನನ್ನ ಚಲನವಲನ ಗಮಿಸುತಿದ್ದಾರೆ. ರೂಪಾ ವಿರುದ್ದ ಕ್ರಿಮಿನಲ್ ಕೇಸ್ ಹಾಕ್ತೇನೆ. ರೂಪಾ ವಿರುದ್ದ ಪ್ರಕರಣ ದಾಖಲಿಸುತ್ತೇನೆ ಎಂದು ಗಂಗರಾಜು ತಿಳಿಸಿದ್ದಾರೆ.
Key words: D. Rupa –rohini sinduri-audio viral- social activist -Gangaraju.