ಬೆಂಗಳೂರು,ಏಪ್ರಿಲ್,15,2025 (www.justkannada.in): ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ ಮಾಡಲಾಗಿದ್ದು ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ, ಜಾತಿಗಣತಿ ವರದಿಯಲ್ಲಿ ಒಕ್ಕಲಿಗ ಸಮುದಾಯ ಅನ್ಯಾಯವಾದರೆ ಒಕ್ಕಲಿಗ ಸಮುದಾಯ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ
ಇವತ್ತು ಬೆಂಗಳೂರು ಸ್ಮಾರ್ಟ್ ಸಿಟಿ ಆಗಬೇಕಾದರೇ ಕಾರಣ ನಮ್ಮ ಕೆಂಪೇಗೌಡರು . ನಾವು ಜಾತಿಗಣತಿ ವಿರೋಧಿಗಳಲ್ಲ. ಆದರೆ ತಪ್ಪು ಲೆಕ್ಕದಿಂದ ಶಕ್ತಿ ಕುಂದಿಸಲು ಆಗಲ್ಲ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕಾಗುತ್ತೆ ಎಂದರು.
Key words: Caste census, issue, Former CM, D.V. Sadananda Gowda