ಬೆಂಗಳೂರು, ಸೆಪ್ಟೆಂಬರ್ 29, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಸೌತ್ ಇಂಡಿಯಾ 2019 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್ ನಲ್ಲಿ ಮುಂದಿನ ತಿಂಗಳು 20 ರಂದು ನಡೆಯಲಿದ್ದು, ರಾಕಿಂಗ್ ಸ್ಟಾರ್ ಯಶ್ ಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸದ್ಯಕ್ಕೆ ಕೆಜಿಎಫ್ 2 ಸಿನಿಮಾ ಚಿತ್ರೀರಣಕ್ಕೆ ತಡೆಯಾಜ್ಞೆ ಸಿಕ್ಕಿದ ಬೇಸರದಲ್ಲಿರುವ ಯಶ್ ಅಭಿಮಾನಿಗಳಿಗೆ ಈ ವಿಚಾರ ನಿಜಕ್ಕೂ ಸಂತಸ ಸಂಗತಿಯಾಗಲಿದೆ.