ದಲಿತ ಬಾಲಕ ದೇವಾಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಹಾಕಿದ ಪ್ರಕರಣ: ಐವರ ವಿರುದ್ಧ ಪ್ರಕರಣ ದಾಖಲು.

ಕೊಪ್ಪಳ,ಸೆಪ್ಟಂಬರ್,22.2021(www.justkannada.in): ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿ ದಲಿತ ಬಾಲಕ  ದೇವಸ್ಥಾನಕ್ಕೆ ಪ್ರವೇಶಿಸಿದ್ದ ಎಂದು ದಂಡ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ  ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

 ಸೆಪ್ಟೆಂಬರ್ 4 ರಂದು ತನ್ನ ಹುಟ್ಟುಹಬ್ಬ ಇದ್ದ ಕಾರಣ ನಾಲ್ಕು ವರ್ಷದ ದಲಿತ ಬಾಲಕ ಮಿಯಾಪೂರ ಗ್ರಾಮದಲ್ಲಿನ ದೇವಸ್ಥಾನಕ್ಕೆ ಪ್ರವೇಶಿಸಿದ್ದ. ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನದ ಅರ್ಚಕ ಹಾಗೂ ಗ್ರಾಮಸ್ಥರು 25 ಸಾವಿರ ದಂಡ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇದಾದ ಬಳಿಕ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ಶಾಂತಿ ಸಭೆ ಮಾಡಿದ್ದರು. ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಅಧಿಕಾರಿಗಳು ದೂರು ನೀಡಿದ್ದರು.  ಈ ಸಂಬಂಧ ಇದೀಗ ಐವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎನ್ನಲಾಗಿದೆ.

Key words: Dalit boy – entering- temple –fine-Case -filed

ENGLISH SUMMARY…

Case of imposing fine on entry of dalit boy into a temple: Case file against five
Koppal, September 22, 2021 (www.justkannada.in): A boy belonging to a Dalit community in Miyapura Village of Kushtagi Taluk, in Koppal District was fined by some people. A case has been filed against five persons in this case.
A case has been filed at the Kushtagi Police Station against five persons Kanakappa Poojari, Hanumagowda, Gavi Siddappa Myageri, Virupakshagowda Myageri, and Sharanagowda.
A four-year-old Dalit boy had gone to the nearby temple in Miyapura Village on September 4, as it was his birthday. It was alleged that the temple priest and village had imposed a sum of Rs. 25,000 fine for entering the temple, as he was a Dalit.
The Revenue Department officials and police had conducted a peace meeting in the village following the incident. The Social Welfare Department officials had lodged a complaint over the issue, following which cases have been filed at the Kushtagi Police Station against five persons.
Keywords: Koppal/ Kushtagi/ dalit boy/ fined/ enter temple