ಬೆಂಗಳೂರು,ಡಿಸೆಂಬರ್,9,2022(www.justkannada.in): ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಯಾಕೆ ಆಗಬಾರದು..? ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಸಾಧ್ಯವಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷ ಯಾರೊಬ್ಬರ ಮನೆ ಆಸ್ತಿಯಲ್ಲ, ನಮ್ಮ ಶಕ್ತಿ. ಬೇರೆಯವರ ಹಾಗೆ ಮುಸ್ಲೀಂ ಸಿಎಂ ಮಾಡಿ ಎಂದು ಹೇಳಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ನೀಡಿದರು.
ದಲಿತ ಸಮುದಾಯ ಅಂತಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಅವರು ಅನುಭವಿ ಸಮರ್ಥರು ಅಂತಾ ಕೊಟ್ಟದ್ದಾರೆ ಎಂದರು.
ಕೆಲವೊಂದು ಕ್ಷೇತ್ರದಲ್ಲಿ ಅಚ್ಚರಿ ಇರುತ್ತದೆ ವಲಸಿಗರ ಬಗ್ಗೆ ಯಾಕೆ ಮಾತನಾಡುತ್ತೀರಾ ವಿ. ಎಸ್ ಪಾಟೀಲ್, ಬಣಕಾರ್, ಮಧು ಬಂಗಾರಪ್ಪ ವಲಸಿಗರಾ..? ಹೆಬ್ಬಾರ್ ಕ್ಷೇತ್ರದಲ್ಲಿ ವಿಎಸ್ ಪಾಟೀಲ್ ಅರ್ಜಿ ಹಾಕಿದ್ದಾರೆ ಜೆಡಿಎಸ್ ನಿಂದ ಸೋತ 15 ಜನ ಅರ್ಜಿ ಹಾಕಿದ್ದಾರೆ ಎಂದರು.
ಮಸ್ಕಿಯಲ್ಲಿ ಒಬ್ಬರು ಹೋದರು ಮತ್ತೊಬ್ಬರು ಬಂದರು. ಹೊಸಕೋಟೆಯಲ್ಲಿ ಒಬ್ಬರು ಹೋದರು ಶರತ್ ಬಚ್ಚೇಗೌಡರ ಬಂದರು. ಒಬ್ರು ಖಾಲಿ ಆದ್ರೆ ಮತ್ತೊಬ್ಬರು ರೆಡಿ ಆಗುತ್ತಾರೆ. ರಾಜಕೀಯ ನಿಂತ ನೀರಲ್ಲ ಏನು ಬೇಕಾದರೂ ಆಗಬಹುದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Dalit -not -become -CM – Congress- party-KPCC President- DK Shivakumar.