ಇಂದು ಹೊರಬೀಳಲಿದೆ  ನಟ ದರ್ಶನ್ ಜಾಮೀನು ಅರ್ಜಿ ಆದೇಶ

ಬೆಂಗಳೂರು,ಡಿಸೆಂಬರ್,12,2024 (www.justkannada.in):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  2ನೇ ಆರೋಪಿ ನಟ ದರ್ಶನ್ ಗೆ ಇಂದು ನಿರ್ಣಾಯಕ ದಿನವಾಗಿದ್ದು ಇಂದು  ಹೈಕೋರ್ಟ್ ನಲ್ಲಿ ಜಾಮೀನು ಆದೇಶ ಹೊರಬೀಳಲಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ  ನಟ ದರ್ಶನ್ ಮತ್ತು ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಜನ ಆರೋಪಿಗಳ ಬೇಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ.  ಸದ್ಯ ನಟ ದರ್ಶನ್ ಮದ್ಯಂತರ ಜಾಮೀನಿನಲ್ಲಿದ್ದಾರೆ.

ಪ್ರಕರಣ ಸಂಬಂಧ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್  ನ್ಯಾಯಧೀಶರು ಇಂದಿಗೆ ತೀರ್ಪು ಕಾಯ್ದಿರಿಸಿದ್ದು,  ಮಧ್ಯಾಹ್ನ 2.30ಕ್ಕೆ ಜಾಮೀನು ಆದೇಶವನ್ನ ಪ್ರಕಟಿಸಲಿದ್ದಾರೆ.

Key words: Actor, Darshan,  bail application, order, released, today