ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಬಿಗ್ ರಿಲೀಫ್: ಜಾಮೀನು ಮಂಜೂರು ಮಾಡಿದ ಕೋರ್ಟ್

ಬೆಂಗಳೂರು,ಡಿಸೆಂಬರ್,13,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಮತ್ತು ಮೊದಲ ಆರೋಪಿ ಪವಿತ್ರಾಗೌಡಗೆ ಬಿಗ್ ರಿಲೀಫ್ ಸಿಕ್ಕಿದೆ.

ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ ಎಲ್ಲಾ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.  ಆರೋಪಿಗಳಾದ ಪ್ರದೋಷ್, ಜಗದೀಶ್, ಅನುಕುಮಾರ್,  ನಾಗಾರಾಜ್ ಲಕ್ಷ್ಮಣ್ ಗೂ  ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್  ಹಾಗೂ ಪವಿತ್ರಾಗೌಡ ಜೈಲು ಸೇರಿದ್ದರು. ಈ ಮಧ್ಯೆ ನಟ ದರ್ಶನ್ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.  ಆರೋಪಿಗಳಿಗೆ 6 ತಿಂಗಳ ಬಳಿಕ ಜಾಮೀನು ಸಿಕ್ಕಿದೆ.

Key words: actors Darshan, Pavithra Gowda, Court, grants, bail