ಯಾದಗಿರಿ TO ಬೆಂಗಳೂರು : ʼದರ್ಶನʼ ಕ್ಕಾಗಿ ೫೦೦ ಕಿಮೀ ಸೈಕಲ್‌ ತುಳಿದ ವಿಶೇಷ ಅಭಿಮಾನಿ.

Challenging Star Darshan’s die-hard fan travels from Yadagiri to Bangalore 500 km on tricycle to visit him in jail.

 

Challenging Star Darshan’s die-hard fan travels from Yadagiri to Bangalore 500 km on tricycle to visit him in jail.

ಬೆಂಗಳೂರು, ಜೂ.28,2024: (www.justkannada.in news) ಸ್ಯಾಂಡಲ್‌ ವುಡ್‌ ನಟ ದರ್ಶನ್‌ ಕೊಲೆ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗುತ್ತಿಲ್ಲ.

ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ಅವರಿಗೆ ಇನ್ನೂ ಅಭಿಮಾನಿಗಳ ದಂಡೇ ಇದೆ. ಆದರೆ, ಇದೀಗ ಮತ್ತೊಬ್ಬ ವಿಶೇಷ ಅಭಿಮಾನಿ ತನ್ನ ಆರಾಧ್ಯ ದೈವವನ್ನು ಭೇಟಿಯಾಗಲು ಆತ ಕ್ರಮಿಸಿದ ಹಾದಿ ಬೆರಗುಗೊಳಿಸುತ್ತದೆ.

ಸೂರ್ಯಕಾಂತ್ ಎಂಬ ವಿಶೇಷ ಸಾಮರ್ಥ್ಯವುಳ್ಳ ಅಭಿಮಾನಿ , ಯಾದಗಿರಿ ಜಿಲ್ಲೆಯಿಂದ ಪರಪ್ಪನ ಅಗ್ರಹಾರ ಜೈಲಿನವರೆಗೆ ‘ ಮೆಜೆಸ್ಟಿಕ್ ‘ ತಾರೆಯನ್ನು ಭೇಟಿಯಾಗಲು ಧಾವಿಸಿರುವುದು ವಿಶೇಷ.

ನಟ ದರ್ಶನ್‌ ರನ್ನು ಭೇಟಿ ಮಾಡಲು 500 ಕಿಲೋಮೀಟರ್ ತನ್ನ ಮೂರು ಚಕ್ರದ ಸೈಕಲ್‌ನಲ್ಲಿ ಸಂಚರಿಸಿದ್ದಾನೆ. ಒಮ್ಮೆಯಾದರೂ ದರ್ಶನ್ ರನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಸ್ಥಳದಲ್ಲಿದ್ದ ದರ್ಶನ್ ಅಭಿಮಾನಿಗಳ ಕಣ್ಣು ತೇವವಾಗಿಸಿತು.

ದರ್ಶನ್ ಬಂಧನದಿಂದ ನೊಂದ ಸೂರ್ಯಕಾಂತ್ ಸುಮಾರು 500 ಕಿ.ಮೀ ಪ್ರಯಾಣಿಸಿದ್ದಾರೆ. 2003ರಲ್ಲಿ ʼ ದಾಸʼ  ಚಿತ್ರದ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅವರ ನೆರವನ್ನು ಸ್ಮರಿಸಿಕೊಂಡ ಸೂರ್ಯಕಾಂತ್, ದರ್ಶನ್ 50 ಸಾವಿರ ರೂಪಾಯಿ ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.

ಕೃಪೆ : ಎಕನಾಮಿಕ್ಸ್‌ ಟೈಮ್ಸ್

key words: Challenging Star Darshan’s, die-hard fan, travels from, Yadagiri to Bangalore ,500 km, on tricycle, to visit him in jail.