ಮೈಸೂರು, ಅಕ್ಟೋಬರ್ 16, 2021 (www.justkannada.in): ಜನರ ಜಂಬೂ ಸವಾರಿ ನೋಡುವ ಆತುರದಲ್ಲಿ ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿರುವ ಒಡೆಯರ್ ಪ್ರತಿಮೆ ಹಾನಿಗೊಳಗಾಗಿದೆ.
ಹೌದು. ಜಯಚಾಮರಾಜರ ಪ್ರತಿಮೆಗೆ ನಿನ್ನೆ ಹಾನಿಯುಂಟಾಗಿದೆ. ಸಂಭ್ರಮದ ದಸರಾ ಮುಗಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಪ್ರತಿಮೆಗೆ ಹಾನಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಜಯಚಾಮರಾಜ ಒಡೆಯರ್ ಸರ್ಕಲ್‍ನಲ್ಲಿರುವ ಒಡೆಯರ್ ಪ್ರತಿಮೆ ಹಾನಿಗೊಳಗಾಗಿದ್ದು. ನಿನ್ನೆ ಜಂಬೂಸವಾರಿ ವೇಳೆ ಜಂಬೂ ಸವಾರಿ ನೋಡಲು ಜನ ಮುಗಿಬಿದ್ದಿದ್ದರು. ಈ ವೇಳೆ ನಡೆದ ನೂಕಾಟ-ತಳ್ಳಾಟದಿಂದ ಜಯಚಾಮರಾಜ ಒಡೆಯರ್ ಅಮೃತ ಶಿಲೆಯ ಪ್ರತಿಮೆಗೆ ಹಾನಿಯಾಗಿದೆ.
ಪ್ರತಿಮೆ ಬಳಿ ಹಾಕಿದ್ದ ಹೂ ಕುಂಡಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದು ಬಿದ್ದಿದೆ.
ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದು ಬಿದ್ದಿದೆ. ಶೀಘ್ರವೇ ಜಿಲ್ಲಾಡಳಿತ ಇದನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕಿದೆ.
ಪಾಲಿಕೆ ಅಧಿಕಾರಿಗಳ ಭೇಟಿ: ಸ್ಥಳಕ್ಕೆ ಮೈಸೂರು ಪಾಲಿಕೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಲ್ಪಿಗಳ ಜೊತೆ ಭೇಟಿ ನೀಡಿ ಮುರಿದ ಕತ್ತಿಯ ಒಂದು ಭಾಗವನ್ನು ಪಾಲಿಕೆ ಅಧಿಕಾರಿಗಳು ಕೊಂಡೊಯ್ದರು.
ಎರಡು ಮೂರಿ ಬಾರಿ ಇದೇ ರೀತಿ ಆಗಿದೆ. ಈ ಹಿಂದೆಯೂ ದಸರಾ ದಿನ ಮುರಿದುಬಿದ್ದಿತ್ತು. ಇದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ತಿಳಿಸಿದರು. ಶಿಲ್ಪಿ ಸೂರ್ಯ ಪ್ರಕಾಶ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.